ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿಯ ಜೋನ್-2 ಪ್ರದೇಶದಲ್ಲಿ 300 ಎಂಎಂ ಸಾಮರ್ಥ್ಯದ ಮುಖ್ಯ ನೀರಿನ ಕೊಳವೆ ಒಡೆದು ಹೋಗಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜೂನ್ 4ರಿಂದ ಜೂನ್ 7ರವರೆಗೆ ಕಾಜುಬಾಗ, ಕೋಡಿಬಾಗ ಮುಖ್ಯ ರಸ್ತೆ, ನಂದನಗದ್ದಾ, ಮಧ್ಯವಾಡ, ಶಿವಾಜಿವಾಡಾ, ಟೋಲ್‌ನಾಕಾ, ತಾಮಸೆವಾಡಾ, ನದಿವಾಡ, ಅಂಬೇಡ್ಕರ್ ಕಾಲೋನಿ, ತೆಲಂಗ ರಸ್ತೆ, ಚಂದ್ರಾದೇವಿ, ಗಿಂಡಿವಾಡಾ ಹಾಗೂ ಸುಂಕೇರಿ ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮೂರು ದಿನಗಳ ಕಾಲ ನೀರು ಸರಬರಾಜು ಅಸ್ತವ್ಯಸ್ತವಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.