ಕುಮಟಾ: ಹೊಳೆಗದ್ದೆ ಟೋಲ್ ಸಮೀಪದ ಅಲ್ಫಾ ವೈನ್ ಶಾಪ್‌ನ ಶೆಟರ್ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ 2.39 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ನಡೆದಿದೆ.
ಅ.10ರ ರಾತ್ರಿ 10.30ರಿಂದ ಅ.11ರ ಬೆಳಿಗ್ಗೆ 9.30ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳ್ಳರು ವೈನ್ ಶಾಪ್‌ನ ಶೆಟರ್ ಮುರಿದು ಒಳನುಗ್ಗಿ, ಒಳಗಿದ್ದ ಕಪಾಟಿನ ಬಾಗಿಲನ್ನೂ ಮುರಿದು ಅದರಲ್ಲಿದ್ದ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಕುಮಟಾದ ಎಪಿಎಂಸಿ ಸಮೀಪದ ನಿವಾಸಿ ಹಾಗೂ ಅಲ್ಫಾ ವೈನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿರುವ ಜುಜೆ ಫರ್ನಾಂಡೀಸ್ ಅವರು ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.