ಕುಮಟಾ: ಎಪಿಎಂಸಿ ಆವರಣದಲ್ಲಿ ನಿಲ್ಲಿಸಿದ್ದ ಬೊಲೆರೋ ಪಿಕ್ಅಪ್ ವಾಹನದ ಡ್ಯಾಶ್ಬೋರ್ಡ್ನಲ್ಲಿಟ್ಟಿದ್ದ 48 ಸಾವಿರ ರೂ ನಗದು ಹಣ ಕಳ್ಳತನವಾಗಿರುವ ಘಟನೆ ಕುಮಟಾದಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಹಳದೀಪುರ, ಪಳ್ಳಿಕೇರಿ ನಿವಾಸಿ ಹಾಗೂ ಅಡಿಕೆ ವ್ಯಾಪಾರಿ ಮೊಹಮ್ಮದ್ ಮುಕ್ತಿಯಾರ್ (42) ಅವರು ತಮ್ಮ ಬೊಲೆರೋ ಪಿಕ್ಅಪ್ (KA-47/6172) ಅನ್ನು ಕುಮಟಾ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿಲ್ಲಿಸಿದ್ದರು. ಸೆ.1ರಂದು ಬೆಳಗ್ಗೆ 10.15ರಿಂದ 11.15ರ ನಡುವಿನ ಅವಧಿಯಲ್ಲಿ ವಾಹನದ ಡ್ಯಾಶ್ಬೋರ್ಡ್ನಲ್ಲಿದ್ದ 48 ಸಾವಿರ ರೂ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಮೊಹಮ್ಮದ್ ಮುಕ್ತಿಯಾರ್ ಅವರು ಸೆ.1ರಂದು ಸಂಜೆ 5.45ಕ್ಕೆ ಕುಮಟಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.