Friday, July 24, 2026
Join WhatsApp Group
HomeLocal Newsತಾಯಿ-ಮಕ್ಕಳು ನಾಪತ್ತೆ: ಮಾಹಿತಿ ನೀಡಲು ಮನವಿ

ತಾಯಿ-ಮಕ್ಕಳು ನಾಪತ್ತೆ: ಮಾಹಿತಿ ನೀಡಲು ಮನವಿ

ಕಾರವಾರ: ಕುಮಟಾ ತಾಲೂಕಿನ ದೀವಳ್ಳಿ ಗ್ರಾಮದ ನಿವಾಸಿ ರೇಷ್ಮಾ ನಿತ್ಯಾನಂದ ನಾಯ್ಕ (34) ಅವರು ತಮ್ಮ ಇಬ್ಬರು ಮಕ್ಕಳಾದ ಜಾಹ್ನವಿ (10) ಮತ್ತು ಯಶಿಕಾ (7) ಜೊತೆ ಏಪ್ರಿಲ್ 16ರಂದು ಮಧ್ಯಾಹ್ನ 12.30ರ ಸುಮಾರಿಗೆ ಮನೆಯಿಂದ ತವರು ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದಾರೆ. ಆದರೆ ಅವರು ತವರು ಮನೆಗೂ ತೆರಳದೇ, ಮರಳಿ ಮನೆಗೂ ಬಾರದೇ ಕಾಣೆಯಾಗಿದ್ದಾರೆ.

ನಾಪತ್ತೆಯಾದವರ ವಿವರ:

  • ರೇಷ್ಮಾ ನಿತ್ಯಾನಂದ ನಾಯ್ಕ (34): ಸುಮಾರು 5 ಅಡಿ ಎತ್ತರ, ಉದ್ದನೆಯ ಮುಖ, ಸದೃಢ ಮೈಕಟ್ಟು, ಗೋಧಿ ವರ್ಣ. ಹಸಿರು ಬಣ್ಣದ ಚೂಡಿದಾರ ಟಾಪ್ ಹಾಗೂ ಕಪ್ಪು ಲಗೀನ್ಸ್ ಧರಿಸಿದ್ದಾಳೆ. ಕೊಂಕಣಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ.
  • ಜಾಹ್ನವಿ ನಿತ್ಯಾನಂದ ನಾಯ್ಕ (10): ಸುಮಾರು 4 ಅಡಿ ಎತ್ತರ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು, ಗೋಧಿ ವರ್ಣ. ಬೂದಿ ಬಣ್ಣದ ಫ್ರಾಕ್ ಧರಿಸಿದ್ದಾಳೆ. ಕನ್ನಡ ಮಾತನಾಡುತ್ತಾಳೆ.
  • ಯಶಿಕಾ ನಿತ್ಯಾನಂದ ನಾಯ್ಕ (7): ಸುಮಾರು 3 ಅಡಿ ಎತ್ತರ, ದುಂಡನೆ ಮುಖ, ಸಾಧಾರಣ ಮೈಕಟ್ಟು, ಗೋಧಿ ವರ್ಣ. ಕಂದು ಬಣ್ಣದ ಫ್ರಾಕ್ ಧರಿಸಿದ್ದಾಳೆ.

ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಕುಮಟಾ ಪೊಲೀಸ್ ಠಾಣೆಯ ದೂರವಾಣಿ 08386-222333 / 9480805272 ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share