Friday, July 24, 2026
Join WhatsApp Group
HomeLocal Newsಕಂಚನಹಳ್ಳಿಯಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮ

ಕಂಚನಹಳ್ಳಿಯಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮ

ಯಲ್ಲಾಪುರ: ಶ್ರೀ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ತಾಲೂಕಿನ ಹುತ್ಕಂಡ ಗ್ರಾಮದ ಕಂಚನಹಳ್ಳಿಯ ಜನಪ್ರಿಯ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಈ ಸಂದರ್ಭದಲ್ಲಿ ಶತ ಲಲಿತಾ ಸಹಸ್ರನಾಮ ಪಾರಾಯಣ, ಲಲಿತಾ ಸಹಸ್ರನಾಮ ಲಕ್ಷ ಕುಂಕುಮಾರ್ಚನೆ, ಶತ ಸುವಾಸಿನಿ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿ-ವಿಧಾನಗಳು ನೆರವೇರಿದವು. ವಿದ್ವಾನ್ ಲಕ್ಷ್ಮೀನಾರಾಯಣ ಭಟ್ ತಾರಿಮಕ್ಕಿ ಅವರ ಪೌರೋಹಿತ್ಯದಲ್ಲಿ ಸಪ್ತಶತಿ ಪಾರಾಯಣ ಜರುಗಿತು.

ಲಲಿತಾ ಸಹಸ್ರನಾಮ ಹಾಗೂ ಅರ್ಚನೆ ಪೂಜೆಗಳನ್ನು ಜನಪ್ರಿಯ ಟ್ರಸ್ಟ್‌ನ ಮಹೇಶ್ ಭಟ್ ಹಾಗೂ ವಿದ್ವಾನ್ ಶ್ರೀಪಾದ್ ಭಟ್ ಆನೆಗುಂಡಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಬಳಿಕ ಕಾವೇರಿ ಮಳಲಗಾಂವ್ ಅವರಿಂದ ಕಟೀಲು ಮಹಾತ್ಮೆ ಹರಿಕಥೆ ಕಾರ್ಯಕ್ರಮ ಜರುಗಿತು. ಪ್ರಭಾತ್ ಜೋಡಳ್ಳ ಹಾರ್ಮೋನಿಯಂ ಹಾಗೂ ನಾರಾಯಣ ಹಿಟ್ಟಿನಬೈಲ್ ತಬಲಾ ಸಾಥ್ ನೀಡಿದರು.

ಕಾರ್ಯಕ್ರಮವನ್ನು ಜನಪ್ರಿಯ ಟ್ರಸ್ಟ್ ವತಿಯಿಂದ ಮಹೇಶ್ ಭಟ್ ಸಂಯೋಜಿಸಿ ನಿರ್ವಹಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share