ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ನಡೆಯುತ್ತಿರುವ 50ನೇ ಸಾರ್ವಜನಿಕ ಶ್ರೀ ಗಜಾನನೋತ್ಸವದ ಅಂಗವಾಗಿ ಸೆಪ್ಟೆಂಬರ್ 17ರಂದು ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ. 17ರಂದು ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ಗಣಹವನ ನಡೆಯಲಿದ್ದು, ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅನ್ನಸಂತರ್ಪಣೆಯ ಸೇವೆಯನ್ನು ಮಾವಿನಕಟ್ಟಾದ ಕು. ಬಿಂದು ಪ್ರಕಾಶ ನಾಯ್ಕ ಅವರು ವಹಿಸಿಕೊಂಡಿದ್ದಾರೆ ಎಂದು ಶ್ರೀ ಗಜಾನನೋತ್ಸವ ಸಮಿತಿ ತಿಳಿಸಿದೆ.
ಮಾವಿನಕಟ್ಟಾದ ಶ್ರೀ ಗಜಾನನೋತ್ಸವ ಸಮಿತಿಯ ವತಿಯಿಂದ ಸೆಪ್ಟೆಂಬರ್ 14ರಿಂದ 18ರವರೆಗೆ ನಡೆಯುತ್ತಿರುವ ಐದು ದಿನಗಳ ಗಜಾನನೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗಣಪತಿಯ ದರ್ಶನ ಪಡೆದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.
ಸೆಪ್ಟೆಂಬರ್ 18ರಂದು ಉತ್ಸವದ ಸಮಾರೋಪ ನಡೆಯಲಿದ್ದು, ಮಹಾಮಂಗಳಾರತಿ, ಫಲ-ಪುಷ್ಪಗಳ ಹರಾಜು ಹಾಗೂ ಶ್ರೀ ಗಜಾನನ ಮೂರ್ತಿಯ ಮೆರವಣಿಗೆಯ ಬಳಿಕ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.