Friday, March 13, 2026
HomeNationalಪ್ರಧಾನಿ ಮೋದಿ ವಿಮಾನ ತುರ್ತು ಭೂಸ್ಪರ್ಶ

ಪ್ರಧಾನಿ ಮೋದಿ ವಿಮಾನ ತುರ್ತು ಭೂಸ್ಪರ್ಶ

ಅಸ್ಸಾಂ: ಅಸ್ಸಾಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ ಅವರಿದ್ದ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಆದರೆ, ಇದೇನೂ ತಾಂತ್ರಿಕ ದೋಷ ಅಥವಾ ಇನ್ಯಾವುದೇ ಕಾರಣಕ್ಕೆ ನಡೆದಿದ್ದಲ್ಲ!

ಅಸ್ಸಾಂನಲ್ಲಿ ನೂತನವಾಗಿ ‘ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ’ (ELF)ನಿರ್ಮಿಸಲಾಗಿದೆ. ಈ ‘ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ’ (ELF) ಹೆದ್ದಾರಿ ರನ್‌ವೇ ಮೇಲೆ ಪ್ರಧಾನಿ ಮೋದಿ ವಿಮಾನ ಯಶಸ್ವಿಯಾಗಿ ಲ್ಯಾಂಡ್‌ ಆಗಿದೆ.

ಇದು ದೇಶದ ರಕ್ಷಣಾ ಸನ್ನದ್ಧತೆ, ಈಶಾನ್ಯ ಭಾರತದ ಭದ್ರತೆ ಹಾಗೂ ತುರ್ತು ಪರಿಸ್ಥಿತಿಗಳಿಗೆ ಮಹತ್ವದ ಹೆಜ್ಜೆಯಾಗಿದೆ. ಸುಮಾರು 100 ಕೋಟಿ ರೂ ವೆಚ್ಚದ ಈ ಯೋಜನೆಯು ಭಾರತದ ಬಲಿಷ್ಠ ಮೂಲಸೌಕರ್ಯಕ್ಕೆ ಸಾಕ್ಷಿಯಾಗಿದ್ದು, ವಾಯುಪಡೆಯ ಕಾರ್ಯಾಚರಣೆಯನ್ನು ಮತ್ತಷ್ಟು ವೇಗಗೊಳಿಸಲಿದೆ.

ಸಾಮಾನ್ಯವಾಗಿ ವಿಮಾನಗಳು ಇಳಿಯಲು ಸುಸಜ್ಜಿತ ವಿಮಾನ ನಿಲ್ದಾಣಗಳ ಅಗತ್ಯವಿದೆ. ಆದರೆ, ಯುದ್ಧ ಅಥವಾ ತುರ್ತು ಪರಿಸ್ಥಿತಿಯ ಸಮಯದಲ್ಲಿ ವಾಯುಪಡೆಯ ವಿಮಾನಗಳು ಸುಲಭವಾಗಿ ಇಳಿಯಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಗಳನ್ನೇ ರನ್‌ವೇಗಳಾಗಿ ಪರಿವರ್ತಿಸಲಾಗುತ್ತದೆ. ಅಸ್ಸಾಂನಲ್ಲಿ ಇಂತಹ ವ್ಯವಸ್ಥೆಯನ್ನು ಪ್ರಧಾನಿ ಮೋದಿಯವರು ಶನಿವಾರ ಉದ್ಘಾಟಿಸಿದ್ದಲ್ಲದೆ, ಸ್ವತಃ ತಾವೇ ಅದರ ದಕ್ಷತೆಯನ್ನು ಜಗತ್ತಿಗೆ ಸಾರಿದ್ದಾರೆ.

ಯುದ್ಧದ ಸಮಯ ಅಥವಾ ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಸುರಕ್ಷಿತವಾಗಿ ಇಳಿಯಲು ಈ ವಿಧಾನ ಸಹಕಾರಿಯಾಗಿದೆ. ಇದು ಅಸ್ಸಾಂನ ಸಂಪರ್ಕ ವ್ಯವಸ್ಥೆಯು ಕೇವಲ ಪ್ರಯಾಣಕ್ಕಷ್ಟೇ ಸೀಮಿತವಾಗದೆ, ದೇಶದ ಭದ್ರತೆಗೂ ಪೂರಕವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share