Ad
Home Local News ಶಾಲಾ ಮಕ್ಕಳಿಗೆ ಕಳಪೆ ಪಾದರಕ್ಷೆ? ಲೋಕಾಯುಕ್ತರಿಗೆ ದೂರು ನೀಡಿ!

ಶಾಲಾ ಮಕ್ಕಳಿಗೆ ಕಳಪೆ ಪಾದರಕ್ಷೆ? ಲೋಕಾಯುಕ್ತರಿಗೆ ದೂರು ನೀಡಿ!

0
10

ಕಾರವಾರ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನಲ್ಲಿ ಸರ್ಕಾರದಿಂದ ವಿತರಿಸಲಾಗಿರುವ ಶೂ ಹಾಗೂ ಸ್ಯಾಂಡಲ್‌ಗಳ ಗುಣಮಟ್ಟದ ಕುರಿತು ಪೋಷಕರಿಗೆ ಯಾವುದೇ ದೂರು ಅಥವಾ ಆಕ್ಷೇಪಣೆಗಳಿದ್ದರೆ ಲೋಕಾಯುಕ್ತರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳಿಗೆ ವಿತರಿಸಿರುವ ಶೂ-ಸ್ಯಾಂಡಲ್‌ಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ದೂರುಗಳಿದ್ದಲ್ಲಿ ಸೆಪ್ಟೆಂಬರ್ 18ರೊಳಗಾಗಿ ಕಾರವಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ತಿಳಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ದೂರುಗಳನ್ನು ಕಚೇರಿಯ ದೂರವಾಣಿ ಸಂಖ್ಯೆ 08382-295293, 08382-220198, ಇ-ಮೇಲ್ kla-kwrsp-ka@nic.in ಅಥವಾ ವಾಟ್ಸಾಪ್‌ ಸಂಖ್ಯೆ 9364062572, 9364062676, 9364062677 ಮೂಲಕ ಸಲ್ಲಿಸಬಹುದು ಎಂದು ಕಾರವಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಶಾಲಾ ಮಕ್ಕಳಿಗೆ ವಿತರಿಸಲಾಗಿರುವ ಶೂ ಅಥವಾ ಸ್ಯಾಂಡಲ್‌ಗಳ ಗುಣಮಟ್ಟದ ಕುರಿತು ಪೋಷಕರು ಗಮನಿಸಿ, ಯಾವುದೇ ಸಮಸ್ಯೆ ಕಂಡುಬಂದಲ್ಲಿ ನಿಗದಿತ ಅವಧಿಯೊಳಗೆ ದೂರು ಅಥವಾ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!