ಯಲ್ಲಾಪುರ: ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಸಂಭವಿಸಿದ ಭೀಕರ ದುರಂತದ ಕುರಿತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ಒಂದೇ ಕುಟುಂಬದ 8 ಜನರು ನೀರಿನ ರಭಸಕ್ಕೆ ಸಿಲುಕಿ ಜೀವ ಕಳೆದುಕೊಂಡಿರುವುದು ನಿಜಕ್ಕೂ ನಂಬಲಾರದ ದುಃಖದ ಸಂಗತಿ. ಒಂದು ಮನೆಯ ಬೆಳಕೇ ಕ್ಷಣಾರ್ಧದಲ್ಲಿ ನಂದಿಹೋಗಿರುವ ಈ ದುರಂತವು ಇಡೀ ಸಮಾಜವನ್ನೇ ಮೌನಗೊಳಿಸಿದೆ.
ಮೃತರಾದ ಎಲ್ಲಾ ಆತ್ಮಗಳಿಗೆ ದೇವರು ಚಿರಶಾಂತಿ ನೀಡಲಿ. ದುಃಖ ಸಾಗರದಲ್ಲಿ ಮುಳುಗಿರುವ ಕುಟುಂಬಸ್ಥರಿಗೆ ಹಾಗೂ ಬಂಧು ಬಳಗಕ್ಕೆ ಈ ಅಸಹನೀಯ ನೋವನ್ನು ತಡೆದುಕೊಳ್ಳುವ ಧೈರ್ಯ ಮತ್ತು ಶಕ್ತಿ ದೊರಕಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಕಾಣೆಯಾಗಿರುವವರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ಆಶಯ ವ್ಯಕ್ತಪಡಿಸಿರುವ ಅವರು, ಈ ದುಃಖದ ಕ್ಷಣದಲ್ಲಿ ನಾವೆಲ್ಲರೂ ಅವರ ಕುಟುಂಬದ ಜೊತೆಗಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ.