Monday, September 7, 2026
Join WhatsApp Group
HomeCrimeಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಶಿರಸಿ: ನಗರದ ಬಿಡ್ಕಿ ಸರ್ಕಲ್ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.

ಸುಭಾಷನಗರ ನಿವಾಸಿ ವೆಂಕಟೇಶ್ ನಾರಾಯಣ ಬೋವಿವಡ್ಡರ್ (43) ಮೃತ ದುರ್ದೈವಿ. ಜೂನ್ 17ರಂದು ಮಧ್ಯಾಹ್ನ ಅವರು ಪರಮೇಶ್ವರ ಕನ್ನಾ ನಾಯ್ಕ ಅವರೊಂದಿಗೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು. ಕೇಂದ್ರ ಬಸ್ ನಿಲ್ದಾಣದಿಂದ ಒನ್‌ವೇ ರಸ್ತೆಯ ಮೂಲಕ ಬರುತ್ತಿದ್ದ ವೇಳೆ ಬಿಡ್ಕಿ ಸರ್ಕಲ್ ಬಳಿ ಟಾಕ್ಟರ್‌ಗೆ ಸ್ಕೂಟಿ ಡಿಕ್ಕಿ ಹೊಡೆದಿತ್ತು.

ಆರೆಕೊಪ್ಪದ ನಾಗರಾಜ ಮಾರುತಿ ನಾಯ್ಕ ಚಾಲನೆ ಮಾಡುತ್ತಿದ್ದ ಟಾಕ್ಟರ್‌ನ ಎಂಜಿನ್ ಹಾಗೂ ಟಯರ್ ನಡುವಿನ ಭಾಗಕ್ಕೆ ಸ್ಕೂಟಿ ಗುದ್ದಿದ ಪರಿಣಾಮ ಸವಾರ ಮತ್ತು ಸಹಸವಾರ ಇಬ್ಬರೂ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ವೆಂಕಟೇಶ್ ಬೋವಿವಡ್ಡರ್ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವೆಂಕಟೇಶ್ ಚಿಕಿತ್ಸೆಗೂ ಸ್ಪಂದಿಸದೆ ಜೂನ್ 18ರ ಸಂಜೆ ಕೊನೆಯುಸಿರೆಳೆದಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share