Friday, July 24, 2026
Join WhatsApp Group
HomeLocal Newsಟಿಎಂಎಸ್ ಚುನಾವಣೆ ಪ್ರಕರಣ: ಹೈಕೋರ್ಟ್ ತೀರ್ಪು | ಮತ ಎಣಿಕೆಗೆ ದಾರಿ ಸುಗಮ

ಟಿಎಂಎಸ್ ಚುನಾವಣೆ ಪ್ರಕರಣ: ಹೈಕೋರ್ಟ್ ತೀರ್ಪು | ಮತ ಎಣಿಕೆಗೆ ದಾರಿ ಸುಗಮ

ಧಾರವಾಡ/ಬೆಂಗಳೂರು: ಟಿಎಂಎಸ್ ಸಂಸ್ಥೆಯ ಚುನಾವಣೆಗೆ ಸಂಬಂಧಿಸಿದಂತೆ ಉದ್ಭವಿಸಿದ್ದ ಕಾನೂನು ವಿವಾದಕ್ಕೆ Karnataka High Court Dharwad Bench ಮಹತ್ವದ ತೀರ್ಪು ನೀಡಿದ್ದು, ಮತ ಎಣಿಕೆಗೆ ಇದ್ದ ಅಡೆತಡೆ ನಿವಾರಣೆಯಾಗಿದೆ.

ಇಡಗುಂದಿ ಪ್ರಾಥಮಿಕ ಸೊಸೈಟಿ ಸಲ್ಲಿಸಿದ್ದ, ಟಿಎಂಎಸ್ ಸಂಸ್ಥೆಯ ಚುನಾವಣಾ ನಿಯಮಗಳನ್ನು ಪ್ರಶ್ನಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಇದೇ ವೇಳೆ ಸಹಕಾರ ಇಲಾಖೆಯ ಕಾರ್ಯದರ್ಶಿ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಟಿಎಂಎಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಇನ್ನೊಂದೆಡೆ, ಆಡಳಿತಾಧಿಕಾರಿ ನೇಮಕವನ್ನು ಪ್ರಶ್ನಿಸಿ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನೂ ನ್ಯಾಯಾಲಯ ಅಂಗೀಕರಿಸಿದೆ.

ಈ ತೀರ್ಪಿನಿಂದ ಕಳೆದ ಏಳು ತಿಂಗಳಿನಿಂದ ಚುನಾವಣೆಯ ನಂತರವೂ ಬಾಕಿ ಉಳಿದಿದ್ದ ಮತ ಎಣಿಕೆ ಪ್ರಕ್ರಿಯೆಗೆ ಇದೀಗ ಹಸಿರು ನಿಶಾನೆ ದೊರೆತಂತಾಗಿದೆ.

ಟಿಎಂಎಸ್ ಸಂಸ್ಥೆ ಹಾಗೂ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಪರವಾಗಿ ಖ್ಯಾತ ನ್ಯಾಯವಾದಿ Narayana V Yaji ಹಾಗೂ ಹಿರಿಯ ನ್ಯಾಯವಾದಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ Vivek Subba Reddy ವಾದ ಮಂಡಿಸಿದರು. ಈ ಪ್ರಕರಣದಲ್ಲಿ ನ್ಯಾಯಮೂರ್ತಿ Ashok Kinagi ತೀರ್ಪು ನೀಡಿದ್ದಾರೆ.

ಹೈಕೋರ್ಟ್ ನ್ಯಾಯವಾದಿ ರಾಜೇಂದ್ರ ತಲವಾಟ ನ್ಯಾಯವಾದಿಗಳ ತಂಡದಲ್ಲಿ ಶ್ರಮಿಸಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share