Ad
Ad
Ad
Home Uncategorized ಗೌರಿ-ಗಣೇಶ ಹಬ್ಬಕ್ಕೆ ಯಲ್ಲಾಪುರ TMSನಿಂದ ಭರ್ಜರಿ ಆಫರ್‌!

ಗೌರಿ-ಗಣೇಶ ಹಬ್ಬಕ್ಕೆ ಯಲ್ಲಾಪುರ TMSನಿಂದ ಭರ್ಜರಿ ಆಫರ್‌!

0
5

ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ

ಯಲ್ಲಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಸುತ್ತಿರುವ ಗ್ರಾಹಕರಿಗೆ ಯಲ್ಲಾಪುರದ ರೈತರ ಜೀವನಾಡಿ ಸಂಸ್ಥೆ ಟಿಎಂಎಸ್‌ ಸಿಹಿ ಸುದ್ದಿ ನೀಡಿದೆ. ಟಿಎಂಎಸ್‌ ಸುಪರ್‌ ಮಾರ್ಟ್‌ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿವಿಧ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ಡಿಸ್ಕೌಂಟ್‌ ಸೇಲ್‌ ಆರಂಭವಾಗಿದ್ದು, ಗ್ರಾಹಕರು ಹಲವು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

ಹಲವು ವರ್ಷಗಳಿಂದ ಯಲ್ಲಾಪುರ ತಾಲೂಕಿನ ರೈತರು, ಗ್ರಾಮೀಣ ಜನತೆ ಹಾಗೂ ಗ್ರಾಹಕರ ವಿಶ್ವಾಸ ಗಳಿಸಿರುವ ಟಿಎಂಎಸ್‌, ಅಡಕೆ ವಿಕ್ರಿ, ಸುಪರ್‌ ಮಾರ್ಟ್‌, ಗೊಬ್ಬರ ವಿಭಾಗ, ಪೆಟ್ರೋಲ್‌ ಬಂಕ್‌ ಸೇರಿದಂತೆ ವಿವಿಧ ಸೇವೆಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಮತ್ತಷ್ಟು ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ಡಿಸ್ಕೌಂಟ್‌ ಸೇಲ್‌ ಆಯೋಜಿಸಲಾಗಿದೆ.

ಸುಗಂಧ ದ್ರವ್ಯಗಳು ಮತ್ತು ಅಗರಬತ್ತಿಗಳಿಗೆ ಶೇ.20 ರಿಯಾಯಿತಿ ನೀಡಲಾಗಿದ್ದು, ಮನೆ ಬಳಕೆಯ ಹಲವು ವಸ್ತುಗಳ ಖರೀದಿಗೆ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದೆ. ಎಕ್ಸೋ ಪಾತ್ರೆ ಸಾಬೂನುಗಳ ಪ್ಯಾಕ್‌ ಖರೀದಿಯಲ್ಲಿಯೂ ಆಕರ್ಷಕ ಆಫರ್‌ ಇದ್ದು, 12 ಖರೀದಿಸಿದರೆ ಒಂದು ಉಚಿತವಾಗಿ ಪಡೆಯಬಹುದಾಗಿದೆ.

ಅಡುಗೆಮನೆಯ ಬಳಕೆಯ ವಸ್ತುಗಳಲ್ಲೂ ರಿಯಾಯಿತಿ ಸಿಗಲಿದೆ. MTRನ 100 ಗ್ರಾಂ ರಸಂ ಪುಡಿ, 100 ಗ್ರಾಂ ಸಾಂಬಾರ್‌ ಪುಡಿ, ಗುಲಾಬ್‌ ಜಾಮೂನ್‌ ಹಾಗೂ ಶಾವಿಗೆಗಳ ಮೇಲೆ ಶೇ.10 ರಿಯಾಯಿತಿ ನೀಡಲಾಗಿದೆ.  ಗೃಹೋಪಯೋಗಿ ಸ್ಟೀಲ್‌ ವಸ್ತುಗಳ ಮೇಲೂ ಶೇ.10 ರಿಯಾಯಿತಿ ಲಭ್ಯವಿದೆ.

ಮನೆ ಬೆಳಗಿಸುವ LED ಬಲ್ಬ್‌ಗಳನ್ನೂ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಆಯ್ದ LED ಬಲ್ಬ್‌ಗಳಿಗೆ ಒಂದು ವರ್ಷದ ಗ್ಯಾರಂಟಿ ಇದ್ದು, 9 ವ್ಯಾಟ್‌ LED ಬಲ್ಬ್‌ ಖರೀದಿಗೆ ಒಂದು ಖರೀದಿಸಿದರೆ ಮತ್ತೊಂದು ಉಚಿತ ಎಂಬ ವಿಶೇಷ ಆಫರ್‌ ಕೂಡ ಇದೆ.

ಬಟ್ಟೆ ತೊಳೆಯುವ ಉತ್ಪನ್ನಗಳಲ್ಲಿಯೂ ಗಮನ ಸೆಳೆಯುವ ದರಗಳನ್ನು ನೀಡಲಾಗಿದೆ. ಸರ್ಫ್‌ ಎಕ್ಸೆಲ್ ಮ್ಯಾಟಿಕ್‌ ಪ್ರೋ 5 ಲೀಟರ್‌ 1,080 ರೂ ಬದಲು 950 ರೂ, ಏರಿಯಲ್‌ ಲಿಕ್ವಿಡ್‌ ಟಾಪ್‌ ಲೋಡ್‌ 6 ಲೀಟರ್‌ 1,029ರ ಬದಲು 900ಕ್ಕೆ ಹಾಗೂ ಏರಿಯಲ್‌ ಲಿಕ್ವಿಡ್‌ ಫ್ರಂಟ್‌ ಲೋಡ್‌ 6 ಲೀಟರ್‌ 1,209 ರೂ ಬದಲು 1,050 ರೂ.ಗೆ ಲಭ್ಯವಿದೆ.

ಇನ್ನು ಮಿಲ್ಟನ್‌ ನೀರಿನ ಬಾಟಲಿ ಹಾಗೂ ಕಾಫಿ ಪ್ಲಾಸ್ಕ್‌ಗಳ ಮೇಲೆ ಶೇ.15 ರಿಯಾಯಿತಿ ಸಿಗಲಿದೆ. ನಂದಿ ಖಾರದ ಪುಡಿ ಹಾಗೂ ಎವರೆಸ್ಟ್‌ ತೀಕಾಲಾಲ್‌ ಖಾರದ ಪುಡಿಯ 100, 200 ಮತ್ತು 500 ಗ್ರಾಂ ಪ್ಯಾಕ್‌ಗಳ ಮೇಲೂ ಶೇ.10 ರಿಯಾಯಿತಿ ನೀಡಲಾಗಿದೆ.

ಮನೆ ಸ್ವಚ್ಛತೆಗೆ ಬಳಸುವ ಉತ್ಪನ್ನಗಳಲ್ಲೂ ವಿಶೇಷ ದರಗಳಿವೆ. ಮೋರ್‌ ಲೈಟ್‌ ಡಿಟರ್ಜಂಟ್‌ 5 ಲೀಟರ್‌ ಲಿಕ್ವಿಡ್‌ 405 ರೂ.ಗೆ ಲಭ್ಯವಿದೆ. ಗಾಲ ಕ್ವಿಕ್‌ ಸ್ಪಿನ್‌ ಮಾಫ್‌ ಮೇಲೆ ಶೇ.28.5 ರಿಯಾಯಿತಿ ನೀಡಲಾಗಿದ್ದು, 1,399 ರೂ MRP ಹೊಂದಿರುವ ಉತ್ಪನ್ನವನ್ನು 1,000 ರೂ.ಗೆ ಪಡೆಯಬಹುದಾಗಿದೆ. ಇದರಿಂದ ಗ್ರಾಹಕರಿಗೆ 399 ರೂ ಉಳಿತಾಯವಾಗಲಿದೆ.

ಅಷ್ಟೇ ಅಲ್ಲ, ಗಾಲ ಸೂಪರ್‌ ಸ್ಕ್ರಬ್‌ ಕೂಡ ವಿಶೇಷ ದರದಲ್ಲಿ ಲಭ್ಯವಿದ್ದು, 30 ರೂ MRP ಇರುವ ಒಂದು ಪೀಸ್‌ 25 ರೂ.ಗೆ ಸಿಗಲಿದೆ. ನಾಲ್ಕು ಪೀಸ್‌ಗಳನ್ನು 100 ರೂಗಳಿಗೆ ಖರೀದಿಸಬಹುದು!

ಹಬ್ಬದ ಖರೀದಿ, ಬೆಲೆ ಕಡಿಮೆ-ಉಳಿತಾಯ ಹೆಚ್ಚು ಎಂಬ ರೀತಿಯಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳನ್ನು ನೀಡಿರುವ ಟಿಎಂಎಸ್‌ ಸುಪರ್‌ ಮಾರ್ಟ್‌ನ ಈ ವಿಶೇಷ ಡಿಸ್ಕೌಂಟ್‌ ಸೇಲ್‌, ಗೌರಿ ಗಣೇಶ ಹಬ್ಬದ ಖರೀದಿಗೆ ಉಪಯುಕ್ತವಾಗಲಿದೆ.

ಗೃಹೋಪಯೋಗಿ ವಸ್ತುಗಳ ಖರೀದಿ ಯೋಜನೆಯಲ್ಲಿ ಒಂದೇ ಕಡೆ ಹಲವು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ಸಂಘದ ಸದಸ್ಯ ಬಾಂಧವರು ಹಾಗೂ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಟಿಎಂಎಸ್‌ನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಎಲ್ಲ ಸಿಬ್ಬಂದಿಗಳು ವಿನಂತಿಸಿದ್ದಾರೆ.

ಹಬ್ಬದ ಸಿದ್ಧತೆಯ ನಡುವೆ ಮನೆಯ ಅಗತ್ಯ ವಸ್ತುಗಳ ಖರೀದಿಗೂ ಪ್ಲ್ಯಾನ್ ಮಾಡುತ್ತಿದ್ದರೆ, ಟಿಎಂಎಸ್‌ ಸುಪರ್‌ ಮಾರ್ಟ್‌ನ ಈ ವಿಶೇಷ ಸೇಲ್‌ ಗಮನ ಸೆಳೆಯಲಿದೆ. ದಿನನಿತ್ಯ ಬಳಕೆಯ ಹಲವು ವಸ್ತುಗಳಿಗೆ ರಿಯಾಯಿತಿ ಹಾಗೂ ಒಂದರೊಂದಿಗೆ ಮತ್ತೊಂದು ಉಚಿತ ಸೇರಿದಂತೆ ಹಲವು ಆಫರ್‌ಗಳು ಇರುವುದರಿಂದ, ಗೌರಿ ಗಣೇಶ ಹಬ್ಬದ ಖರೀದಿಯ ಜೊತೆಗೆ ಉಳಿತಾಯಕ್ಕೂ ಅವಕಾಶಸಿಕ್ಕಂತಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!