Friday, July 24, 2026
Join WhatsApp Group
HomeUncategorizedಮೂರು ವರ್ಷದ ಬಳಿಕ ಮೇ.22ರಂದು ಗೊರಹಳ್ಳಿಯಲ್ಲಿ ಶ್ರೀ ದೊಡ್ಡಮ್ಮ ತಾಯಿ ರಥೋತ್ಸವ

ಮೂರು ವರ್ಷದ ಬಳಿಕ ಮೇ.22ರಂದು ಗೊರಹಳ್ಳಿಯಲ್ಲಿ ಶ್ರೀ ದೊಡ್ಡಮ್ಮ ತಾಯಿ ರಥೋತ್ಸವ

ಗ್ರಾಮದಲ್ಲಿ ಕಂಗೊಳಿಸುತ್ತಿರುವ ದೀಪಾಲಂಕಾರ.

ಮೈಸೂರು : ಪಿರಿಯಾಪಟ್ಟಣ ತಾಲೂಕಿನ ಗೊರಹಳ್ಳಿ ಗ್ರಾಮದಲ್ಲಿ ಮೇ 22ರ ಶುಕ್ರವಾರ ರಾತ್ರಿ ಶ್ರೀ ದೊಡ್ಡಮ್ಮ ತಾಯಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು,

ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಮೂರು ವರ್ಷದ ಬಳಿಕ ನಡೆಯುತ್ತಿರುವ ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.ಗೊರಹಳ್ಳಿ, ಕುಳ್ಳಯ್ಯಕೊಪ್ಪಲು, ಕರಡಿಪುರ ಹಾಗೂ ದೇವಿನಗರ ಗ್ರಾಮಗಳ ಎಲ್ಲಾ ಸಮುದಾಯದ ಜನರು ಒಟ್ಟಾಗಿ ಹಬ್ಬ ಆಚರಿಸುತ್ತಿದ್ದು, ಗ್ರಾಮದೆಲ್ಲೆಡೆ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಹಾಗೂ ಕೆಸರಿ ತೋರಣಗಳು ಕಂಗೊಳಿಸುತ್ತಿವೆ.

ಶುಕ್ರವಾರ ಬೆಳಿಗ್ಗೆ ರಥದ ಮೇಲೆ ಕಳಸ ಪ್ರತಿಷ್ಠಾಪನೆ ನಡೆಯಲಿದ್ದು, ಬಳಿಕ ಉತ್ಸವ ಮೂರ್ತಿಯನ್ನು ವಿಶೇಷ ಅಲಂಕೃತ ಪಲ್ಲಕಿಯಲ್ಲಿ ಮೆರವಣಿಗೆ ಮಾಡಿ ರಥದ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರ ಶ್ರೀ ಬಸವೇಶ್ವರ ದೇವಸ್ಥಾನದಿಂದ ಶ್ರೀ ದೊಡ್ಡಮ್ಮ ಹಾಗೂ ಚಿಕ್ಕಮ್ಮ ತಾಯಿ ದೇವಸ್ಥಾನದವರೆಗೆ ಭಕ್ತಿಭಾವದಿಂದ ರಥೋತ್ಸವ ನಡೆಯಲಿದೆ.ಡೊಳ್ಳುಕುಣಿತ, ಪಟಾಕಿ ಪ್ರದರ್ಶನ, ವಿಶೇಷ ಪೂಜೆಗಳು ಹಾಗೂ ಹರಕೆ ತೀರಿಸುವ ಕಾರ್ಯಕ್ರಮಗಳೊಂದಿಗೆ ಭಕ್ತರು ದೇವಿಯನ್ನು ಆರಾಧಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share