Saturday, May 30, 2026
HomeLocal Newsಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆ ವಿರುದ್ಧ ಆಕ್ರೋಶ

ಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆ ವಿರುದ್ಧ ಆಕ್ರೋಶ

15 ದಿನದಲ್ಲಿಲಿಖಿತಸ್ಪಷ್ಟೀಕರಣಕ್ಕೆಆಗ್ರಹ

ಸಿದ್ದಾಪುರ: ಅರಣ್ಯ ಹಕ್ಕು ಕಾಯ್ದೆಯಡಿ ನಡೆಯುತ್ತಿರುವ ಜಂಟಿ ಮಹಜರ್ ಪ್ರಕ್ರಿಯೆಯಲ್ಲಿ ಅನೇಕ ನ್ಯೂನ್ಯತೆಗಳಿವೆ ಎಂದು ಆರೋಪಿಸಿ ಅರಣ್ಯವಾಸಿಗಳ ನಿಯೋಗವು ಸಿದ್ದಾಪುರ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿತು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗವು, ಸರ್ಕಾರದ ಆದೇಶಗಳನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ತಪ್ಪಾದ ಮಹಜರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ 15 ದಿನಗಳೊಳಗೆ ಲಿಖಿತ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿತು.

ಮನವಿಯಲ್ಲಿ ಅರಣ್ಯವಾಸಿಗಳಿಗೆ ನೋಟಿಸ್ ನೀಡದೇ ಮಹಜರ್ ನಡೆಸುವುದು, ಅಗತ್ಯ ಇಲಾಖಾ ಅಧಿಕಾರಿಗಳ ಅನುಪಸ್ಥಿತಿ, ಅರ್ಜಿದಾರರಿಲ್ಲದೇ ಮಹಜರ್ ಪ್ರಕ್ರಿಯೆ ನಡೆಸುವುದು, ಜಿಪಿಎಸ್ ಆಧಾರಿತ ಅಳತೆಗಳನ್ನು ಮಾತ್ರ ಪರಿಗಣಿಸುವುದು ಸೇರಿದಂತೆ ಹಲವು ಅಕ್ರಮಗಳನ್ನು ಉಲ್ಲೇಖಿಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ಮಹಜರ್ ಪ್ರಕ್ರಿಯೆಯಲ್ಲಿನ ಸಮಸ್ಯೆಗಳನ್ನು ಶೀಘ್ರವೇ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವರಾಯ್ ಮಾಹಿತಿ ನೀಡಿ, ಸಿದ್ದಾಪುರ ತಾಲೂಕಿನ ತಿರಸ್ಕೃತ ಅರ್ಜಿಗಳ ಪೈಕಿ 8,331 ಮಹಜರ್ ಪ್ರಕರಣಗಳನ್ನು ಪೂರ್ಣಗೊಳಿಸಲಾಗಿದ್ದು, ಇನ್ನೂ 1,973 ಪ್ರಕರಣಗಳ ಮಹಜರ್ ಬಾಕಿಯಿದೆ ಎಂದು ತಿಳಿಸಿದರು.

ಇದೇ ವೇಳೆ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ 10,860 ಅರ್ಜಿಗಳಲ್ಲಿ ಕೇವಲ 138 ಮಂದಿಗೆ ಮಾತ್ರ ಸಾಗುವಳಿ ಹಕ್ಕುಪತ್ರ ವಿತರಿಸಲಾಗಿದೆ ಎಂದು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಗ್ರಾಮಗಳ ಅರಣ್ಯವಾಸಿಗಳು, ಹೋರಾಟಗಾರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆ.ಟಿ. ನಾಯ್ಕ ಕ್ಯಾದಗಿ ಸ್ವಾಗತಿಸಿದರು. ಮಾಬ್ಲೇಶ್ವರ್ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರೀನ್ ಕಾರ್ಡ್ ಪ್ರಮುಖರಾದ ನಾಗಪತಿ ಗೌಡ ಹುತ್ಗಾರ್, ಮಂಜುನಾಥ ಮಡಿವಾಳ ಕಿಲಾರ, ರಾಜು ನಾಯ್ಕ ಕಿರೇಕೋಡ, ದಿವಾಕರ ನಾಯ್ಕ ಬಾಳೇಜಡ್ಡಿ, ಮಂಜು ಹುತ್ಗಾರ್, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಶಿವಾನಂದ ಹೊಸೂರು, ಸಿ.ಟಿ. ನಾಯ್ಕ ಮುಂಡಿಗೆ ತಗ್ಗು, ಜಾಗೃತ ಕೃಷಿ ಸಮಾಜ ಅಧ್ಯಕ್ಷ ಶ್ರೀಧರ್ ಹೆಗಡೆ ಮಾತನಾಡಿದರು.

ನಿಯೋಗದಲ್ಲಿ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಹರಿಹರ ಓಂಕಾರ, ದಿವಾಕರ ನಾಯ್ಕ ಕ್ಯಾದಗಿ, ನಾಗಪತಿ ಗೌಡ ಹುತ್ಗಾರ್, ಕಾರ್ಲೂಸ್ ಮಾವಿನಗುಂಡಿ,ಕೆ.ಟಿ. ನಾಯ್ಕ ಹೆಗ್ಗೇರಿ, ಹಾಜಿರಾ ಬೇಗಂ ಕಾನಗೋಡ, ಜಗದೀಶ್ ನಾಯ್ಕ ಶಿರಳಗಿ, ಸೀತಾರಾಮ ಗೌಡ ಹುಕ್ಕಳಿ, ಇಬ್ರಾಹಿಂ ಗೌಡಳ್ಳಿ, ಎಮ್, ಎಸ್ ನಾಯ್ಕ ನರಮುಂಡಿಗೆ, ಸುಧಾಕರ್ ಮಡಿವಾಳ ಬಿಳಗಿ, ಮಂಜುನಾಥ ಮಡಿವಾಳ ಕಿಲಾರ, ಚಂದ್ರಕಾಂತ ನಾಯ್ಕ ಗುಲ್ಲುಮನೆ, ಶ್ರೀಧರ ಹೆಗಡೆ ಕೆರೆಮನೆ, ಅಬ್ದುಲ್ ಸುಬಾನ್ ಸಾಬ್ ಕವಂಚೂರು, ಎಮ್.ಆರ್. ನಾಯ್ಕ ಬೇಡ್ಕಣಿ, ಶಿವಾನಂದ ನಾಯ್ಕ ಹೊಸೂರು, ಎಂ.ಪಿ.ಗೌಡ ಹುಕ್ಕಳಿ, ನಾಗರಾಜ ಮರಾಠಿ ಕೋಡಿಗದ್ದೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share