ಕುಮಟಾ: ಯಾಣದ ಶ್ರೀಗಂಗಾ ಚಂಡಿಕಾ ಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸೆಪ್ಟೆಂಬರ್ 27ರಿಂದ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ದೇವಾಲಯದ ಶತಮಾನಗಳಷ್ಟು ಹಳೆಯ ಘಂಟಾಮಂಟಪದ ಜೀರ್ಣೋದ್ಧಾರ ಹಾಗೂ ನೂತನ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಾಮಗಾರಿ ಪೂರ್ಣಗೊಳ್ಳುವವರೆಗೆ ದೇವಾಲಯದಲ್ಲಿ ನಿತ್ಯ ಸೇವೆಗಳು, ವಿಶೇಷ ಪೂಜೆಗಳು ಹಾಗೂ ದರ್ಶನ ವ್ಯವಸ್ಥೆ ಸ್ಥಗಿತಗೊಳ್ಳಲಿದೆ. ಭಕ್ತರ ಸುರಕ್ಷತೆ ಹಾಗೂ ಕಾಮಗಾರಿಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟಿ ಹಾಗೂ ಉಪಟ್ರಸ್ಟಿ ಮಂಡಳಿ ತಿಳಿಸಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ದರ್ಶನ ಹಾಗೂ ಸೇವೆಗಳನ್ನು ಪುನರಾರಂಭಿಸುವ ದಿನಾಂಕವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. ಈ ಅವಧಿಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಸಹಕರಿಸಿ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲ ನೀಡುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.


