ಯಲ್ಲಾಪುರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ತಾಲೂಕು ಘಟಕದ ವತಿಯಿಂದ 4ನೇ ವರ್ಷದ ಜಿಲ್ಲಾ ಮಟ್ಟದ ಓಪನ್ ರ್ಯಾಪಿಡ್ ಚೆಸ್ ಪಂದ್ಯಾವಳಿ ಅ.4ರಂದು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ತಿಳಿಸಿದ್ದಾರೆ.
ಗುರುವಾರ ಪಂದ್ಯಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ನಾಗೇಂದ್ರ ಯಲ್ಲಾಪುರ ಅವರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ. ಎಲ್, ಹೆಸ್ಕಾಂ ಅಧ್ಯಕ್ಷ ಅಜ್ಜಂಫೀರ ಖಾದ್ರಿ, ಲಯನ್ಸ್ ಅಧ್ಯಕ್ಷ ಶೇಷಗಿರಿ ಪ್ರಭು ಹಾಗೂ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಪ್ರಶಾಂತ ನಾಯ್ಕ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ದೀಪಕ ಭಟ್ಟ, ದಿಲೀಪ ಪಿ. ಭಟ್ಟ, ಗುರುನಾಥ ರೇವಣಕರ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ವಿವೇಕ ಹೆಬ್ಬಾರ್, ವಿಶ್ವನಾಥ ಭಟ್ಟ, ಕೆ.ಎನ್. ಹೆಗಡೆ, ರವೀಂದ್ರ ಬದ್ದಿ, ಸುಧೀರ ಬಲ್ಸೆ, ಅನಂತ ದಂತಳಿಗೆ, ಅಬ್ದುಲ್ ಖಾದರ್ ಎ. ಶೇಖ್, ಸುಬ್ರಾಯ ಗಾಂವ್ಕರ ಬಿದ್ರೆಮನೆ, ಸತೀಶ ಹೆಬ್ಬಾರ್, ವಿ.ಕೆ. ಭಟ್ಟ ಶೀಗೆಪಾಲ್, ನಿರಂಜನ ಭಟ್ಟ, ಎಸ್.ಜಿ. ಬೆದೆಹಕ್ಲು, ವಾಣಿ ಹರ್ಡಿಕರ್, ನಾಗೇಂದ್ರ ಯಲ್ಲಾಪುರ, ಶ್ರೀನಿವಾಸ ಹೆಬ್ಬಾರ್ ಹಾಗೂ ವಿ.ಪಿ. ಹೆಗಡೆ ವೈಶಾಲಿ ಅವರಿಗೆ ನಾಗರಿಕ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ಗುನಗಿ, ಗಜಾನನ ಶೆಟ್ಟಿ ಭಟ್ಕಳ, ಎಸ್.ವಿ. ನಾಯ್ಕ ಹೊನ್ನಾವರ, ನವೀನ ನಾಯ್ಕ ಕುಮಟಾ, ಲಕ್ಷ್ಮಣ ನಾಯ್ಕ ಅಂಕೋಲಾ, ಟೋನಿ ಫರ್ನಾಂಡೀಸ್ ಕಾರವಾರ, ಮನೋಹರ ಗಡಪ್ಪನವರ್ ದಾಂಡೇಲಿ, ಫಕೀರ ಬೆಡಸಗಾಂವ್ ಮುಂಡಗೋಡ, ನವೀನ ಬಿಜಾಪುರ ಹಳಿಯಾಳ ಹಾಗೂ ನಾಗೇಶ ನಾಯ್ಕ ಶಿರಸಿ, ಯೋಗೇಶ ಗೌಡರ್ ಸಿದ್ದಾಪುರ ಅವರನ್ನು ಸನ್ಮಾನಿಸಲಾಗುವುದು.
ಈ ಸಂದರ್ಭದಲ್ಲಿ ಡಿಎಫ್ಒ ಅಬ್ದುಲ್ ಅಜೀಜ್, ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಭಟ್ಟ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಹೆಸ್ಕಾಂ ಕಂಪನಿ ಕಾರ್ಯದರ್ಶಿ ರಾಘವೇಂದ್ರ ಕೋಟೆಮನೆ, ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹಾಗೂ ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ ಬಹುಮಾನ ವಿತರಿಸಲಿದ್ದಾರೆ. ಶಿರಸಿ ಸಂಘದ ಮಾಜಿ ಅಧ್ಯಕ್ಷ ಮಹೇಶ ನಾಯ್ಕ, ಜಿಲ್ಲಾ ಮಾಜಿ ಕಾರ್ಯದರ್ಶಿ ನಾಗರಾಜ ಕುನ್ನೂರು, ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಹಾಗೂ ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಭಾಗವಹಿಸಲಿದ್ದಾರೆ ಎಂದು ವೇಣುಗೋಪಾಲ ಮದ್ಗುಣಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಮಕಬೂಲ್ ಸೈಯದ್ ಅಲಿ ಉಪಸ್ಥಿತರಿದ್ದರು.


