ಯಲ್ಲಾಪುರ: ಬಾರ್ ನಲ್ಲಿ ಗಲಾಟೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಶಿವಣ್ಣ ಉಮೇಶ ಬೋವಿವಡ್ಡರ ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ ಆರೋಪದಡಿ ಯಲ್ಲಾಪುರದ ಮಯಾ@ ಮಹೇಶ, ಸಮೀರ ಶೇಖ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲ್ಲಾಪುರದ ರವೀಂದ್ರನಗರ ನಿವಾಸಿ, ವೆಲ್ಡಿಂಗ್ ಕೆಲಸ ಮಾಡುವ ಶಿವಣ್ಣ ಉಮೇಶ ಬೋವಿವಡ್ಡರ (26) ದೂರು ನೀಡಿದ್ದಾರೆ. ಅ. 16ರಂದು ರಾತ್ರಿ 11 ಗಂಟೆ ಸುಮಾರಿಗೆ ಯಲ್ಲಾಪುರ ಪಟ್ಟಣದ ಶ್ರೀರಾಮ್ ಬಾರ್ & ರೆಸಿಡೆನ್ಸಿಯಲ್ಲಿ ಶಿವಣ್ಣ ಮದ್ಯ ಸೇವಿಸುತ್ತಿದ್ದಾಗ, ಆರೋಪಿತರು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನು ಪ್ರಶ್ನಿಸಿದಾಗ ಮಯಾ @ ಮಹೇಶ ಅವಾಚ್ಯವಾಗಿ ಬೈದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ರವೀಂದ್ರನಗರದ ಸಮೀರ ಶೇಖ ಎಂಬಾತನ ಪ್ರಚೋದನೆಯಿಂದ ಮಯಾ @ ಮಹೇಶ ಬಿಯರ್ ಬಾಟಲಿಯಿಂದ ತನ್ನ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ ಎಂದು ಶಿವಣ್ಣ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ಸುರೇಶ ಕುಂಬಾರ ತನಿಖೆ ಕೈಗೊಂಡಿದ್ದಾರೆ.


