ಯಲ್ಲಾಪುರ: ತಾಲೂಕಿನ ಕಾನಗೋಡ ಬಸ್ ನಿಲ್ದಾಣದ ಸಮೀಪ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರಿಗೆ ಗಾಯಗಳಾದ ಘಟನೆ ಸೆ.28ರಂದು ರಾತ್ರಿ ನಡೆದಿದೆ.
ಹೊನ್ನಳ್ಳಿ, ಹಾಸಣಗಿ ನಿವಾಸಿ ಪುರಂದರ ಸೋಮೇಶ್ವರ ಮರಾಠಿ (30) ನೀಡಿದ ದೂರಿನ ಪ್ರಕಾರ, ಸೆ.28ರಂದು ರಾತ್ರಿ ಸುಮಾರು 7.20ಕ್ಕೆ ಮಹಾದೇವ ನಾಗ್ಯಾ ಮರಾಠಿ ಅವರು ಕೆಎ-31/ಎಕ್ಸ್-6276 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ನಲ್ಲಿ ವಿದ್ಯಾ ಮಹಾದೇವ ಮರಾಠಿ ಅವರನ್ನು ಕೂರಿಸಿಕೊಂಡು ಶಿರಸಿ ಕಡೆಯಿಂದ ಮಂಚಿಕೇರಿ ಕಡೆಗೆ ತೆರಳುತ್ತಿದ್ದರು.
ಕಾನಗೋಡ ಬಸ್ ನಿಲ್ದಾಣದ ಸಮೀಪ ತಲುಪಿದಾಗ, ಮಂಚಿಕೇರಿ ಕಡೆಯಿಂದ ಶಿರಸಿ ಕಡೆಗೆ ಕೆಎ-15/ಇಡಿ-9774 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ನ್ನು ಭರತನಹಳ್ಳಿಯ ಸುಭಾಷ ಮಂಜುನಾಥ ದೇವಾಡಿಗ (26) ಚಲಾಯಿಸಿಕೊಂಡು ಬರುತ್ತಿದ್ದರು.
ಹಿಂಬದಿಯಲ್ಲಿ ಸದಾನಂದ ಪುಟ್ಟಾ ಸಿದ್ದಿ ಅವರನ್ನು ಕೂರಿಸಿಕೊಂಡಿದ್ದ ಸುಭಾಷ ಅವರು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಬೈಕ್ ಚಲಾಯಿಸಿ ತಮ್ಮ ತೀರಾ ಬಲಭಾಗಕ್ಕೆ ಹೋಗಿ ಎದುರಿನಿಂದ ಬರುತ್ತಿದ್ದ ಮಹಾದೇವ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಪಘಾತದಲ್ಲಿ ಮಹಾದೇವ ಅವರ ಕುತ್ತಿಗೆಯ ಹಿಂಭಾಗ ಹಾಗೂ ಎದೆಗೆ ಒಳಪೆಟ್ಟು ಮತ್ತು ಗದ್ದದ ಬಳಿ ಸಾಧಾರಣ ರಕ್ತಗಾಯವಾಗಿದ್ದು, ವಿದ್ಯಾ ಅವರ ಎಡಕಾಲಿಗೆ ತರಚಿದ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


