Ad
Ad
Ad
Home Crime ಯಲ್ಲಾಪುರ | ವೇಗದ ಮಿತಿ ಮೀರಿದ ಲಾರಿ; ಹೋಟೆಲ್‌ ಮಾಲಕನಿಗೆ ನಷ್ಟ!

ಯಲ್ಲಾಪುರ | ವೇಗದ ಮಿತಿ ಮೀರಿದ ಲಾರಿ; ಹೋಟೆಲ್‌ ಮಾಲಕನಿಗೆ ನಷ್ಟ!

0
7

ಯಲ್ಲಾಪುರ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಲಾರಿಯೊಂದು ಹೋಟೆಲ್‌ ಪಕ್ಕದಲ್ಲಿ ನಿಲ್ಲಿಸಿದ್ದ ಎಲ್‌ಇಡಿ ಬೋರ್ಡ್‌ಗೆ ಡಿಕ್ಕಿ ಹೊಡೆದು ಸುಮಾರು 90 ಸಾವಿರ ರೂ ನಷ್ಟ ಉಂಟುಮಾಡಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಜೂ.20ರಂದು ಬೆಳಗಿನ ಜಾವ ಸುಮಾರು 2 ಗಂಟೆಗೆ ಕೆಎ-25/ಎಬಿ-0027 ನೋಂದಣಿಯ ಲಾರಿಯನ್ನು ಚಾಲಕ ಶಫಿ ಸಯ್ಯದ್ ಎಂಬಾತ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಯಲ್ಲಾಪುರದ ಅಕ್ಬರಗಲ್ಲಿಯಲ್ಲಿರುವ ಅಬ್ದುಲ್ ಶುಕೂರ್ ಅವರ ಹೋಟೆಲ್‌ ಪಕ್ಕದಲ್ಲಿ ಲಾರಿ ನಿಯಂತ್ರಣ ತಪ್ಪಿ ಹೋಟೆಲ್‌ನ ಎಲ್‌ಇಡಿ ಬೋರ್ಡ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ಎಲ್‌ಇಡಿ ಬೋರ್ಡ್‌ ಪುಡಿ ಪುಡಿಯಾಗಿದ್ದು, ಸುಮಾರು 90 ಸಾವಿರ ರೂ ಮೌಲ್ಯದ ಹಾನಿ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾನಿಯ ಹಣವನ್ನು ನೀಡುವುದಾಗಿ ಲಾರಿ ಚಾಲಕ ಹೇಳಿದ್ದರೂ, ಬಳಿಕ ಹಣ ನೀಡಲು ನಿರಾಕರಿಸಿದ್ದರಿಂದ ಹೋಟೆಲ್‌ ಮಾಲೀಕ ಅಬ್ದುಲ್ ಶುಕೂರ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!