ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸುತ್ತಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿಯಾಗಿದ್ದಾರೆ.
ಕೃಷಿ ಕ್ಷೇತ್ರಕ್ಕೆ ದೊಡ್ಡ ಘೋಷಣೆ- “ಮುಖ್ಯಮಂತ್ರಿ ಕೃಷಿ ವಿಸ್ತಾರ” ಯೋಜನೆ ಘೋಷಿಸಲಾಗಿದೆ. ಈ ಯೋಜನೆಗೆ ಸುಮಾರು ₹100 ಕೋಟಿ ವೆಚ್ಚ ಮಾಡಲಾಗುತ್ತದೆ. ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಉತ್ಪಾದನೆ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ.ಮಣ್ಣಿನ ಫಲವತ್ತತೆ ಹೆಚ್ಚಿಸಲು “ವಸುಧಾಮೃತ” ಕಾರ್ಯಕ್ರಮ, ರೈತರ ಉತ್ಪನ್ನ ಮಾರಾಟಕ್ಕೆ “ರೈತ ಮಾಲ್” ಸ್ಥಾಪನೆಗಳು ಸೇರಿವೆ.
ಮೂಲಸೌಕರ್ಯ ಅಭಿವೃದ್ಧಿ- ರಸ್ತೆ, ಸೇತುವೆ ಮತ್ತು ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸುಮಾರು ₹8,600 ಕೋಟಿ ಅನುದಾನ ಘೋಷಿಸಿದೆ. ಇದರ ಉದ್ದೇಶ ರಾಜ್ಯದ ರಸ್ತೆ ಮತ್ತು ಸಾರಿಗೆ ಸುಧಾರಣೆ ನಗರ ಮತ್ತು ಗ್ರಾಮ ಮೂಲಸೌಕರ್ಯ ಅಭಿವೃದ್ಧಿ ಆಗಿದೆ.
ಬಜೆಟ್‌ನ ಹೈಲೈಟ್ -ಈ ಬಜೆಟ್‌ನಲ್ಲಿ ಸರ್ಕಾರ ಗಮನ ಕೊಡುತ್ತಿರುವ ಪ್ರಮುಖ ಕ್ಷೇತ್ರಗಳು: ಕೃಷಿ ಮತ್ತು ರೈತರ ಕಲ್ಯಾಣ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಾಮಾಜಿಕ ಕಲ್ಯಾಣ ಮತ್ತು ಗ್ಯಾರಂಟಿ ಯೋಜನೆಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ.