Saturday, May 30, 2026
HomeHealthಮಕ್ಕಳಿಗಾಗಿ ಸುʻಯೋಗʻ!

ಮಕ್ಕಳಿಗಾಗಿ ಸುʻಯೋಗʻ!

ನಿಮ್ಮ ಮಕ್ಕಳಿಗೆ ನೀವು ನೀಡಬಹುದಾದ ಉತ್ತಮ ಉಡಗುಗೊರೆಗಳಲ್ಲೊಂದು!

ಮಕ್ಕಳೆಂದರೆ ಸಂಪತ್ತು, ಅವರೆಂದರೆ ಪ್ರಾಣದಷ್ಟು ಪ್ರೀತಿ, ಭವಿಷ್ಯದ ನಮ್ಮ ಪಾಲಿನ ಕನಸೆಂಬುದೆಲ್ಲವೂ ಹೌದು. ಆದರೆ ನಮ್ಮ ಕನಸಿನ ಚಿಗುರುಗಳು ಹೆಮ್ಮರವಾಗಿ ಬೆಳೆದು ಭದ್ರವಾಗಿ ನಿಲ್ಲಲು ಸಶಕ್ತವಾಗಬೇಕಾದರೆ ಕುಲಕ್ಕೆ ದೀಪವಾಗಿ, ರಾಷ್ಟ್ರದ ಹಿತಕಾಯುವ ಉತ್ತಮ ನಾಗರಿಕನಾಗಿ ಸಂಪನ್ಮೂಲ ವ್ಯಕ್ತಿಯಾಗಬೇಕಾದರೆ ‘ಆರೋಗ್ಯ’ವೆಂಬ ಭಾಗ್ಯ ಅವರದಾಗಿದ್ದರೆ ಮಾತ್ರ ಉಳಿದೆಲ್ಲವನ್ನೂ ಸಾಧ್ಯವಾಗಿಸಬಹುದು.

ಮನೆ ಮಕ್ಕಳು ಕೊಳೆತವು, ಬೀದಿ‌ ಮಕ್ಕಳು ಬೆಳೆದವು ಎಂಬ ನಾಣ್ಣುಡಿಯ ಔಚಿತ್ಯ ಅರಿಯಬೇಕಾದ ಸುಸಮಯವಿದು. ನಮ್ಮ ಮಕ್ಕಳೇ ಸಂಪತ್ತಾಗಿ ಪರಿಣಮಿಸಬೇಕಾದರೆ ಉತ್ತಮ ಪೋಷಕಾಂಶಯುಕ್ತ ಆಹಾರದ ಜೊತೆಗೆ ದೈಹಿಕ ವ್ಯಾಯಾಮವೂ ಅತ್ಯಗತ್ಯ.

ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅಥವಾ ಪುಷ್ಟಿಯಾಗಿ ಬದಲಾಗದಲೆ ಸ್ಥೂಲಕಾಯ, ಮಧುಮೇಹ, ಹೃದ್ರೋಗದಂತಹ ಗಂಭೀರ ಸಮಸ್ಯೆಗಳು ಅನೇಕ ಚಿಕ್ಕ ಮಕ್ಕಳಲ್ಲಿ ತೋರ್ಪಡುತ್ತಿರುವ ಹಿಂದಿನ ಕಾರಣ ದೈಹಿಕ ಮತ್ತು ಮಾನಸಿಕ ಅಸಮತೋಲನವೇ ಅಗಿದೆ.

ಮಕ್ಕಳ ಅನಾರೋಗ್ಯಕ್ಕೆ ಒಂದಷ್ಟು ಕಾರಣಗಳು:

* ಕರಿದ ತಿಂಡಿ ಇತ್ಯಾದಿ ಫಾಸ್ಟ್‌ ಫುಡ್‌ಗಳನ್ನು ಅತಿಯಾಗಿ ಮತ್ತು ಅನಿಯಮಿತವಾಗಿ ಸೇವಿಸುವುದು.

* ಮೊಬೈಲ್, ಟಿ.ವಿ, ಟ್ಯಾಬ್‌ಗಳನ್ನು ಅವಶ್ಯಕತೆಗಿಂತ ಹೆಚ್ಚು ಬಳಸುವುದು.

* ದೈಹಿಕವಾಗಿ ಚಟುವಟಿಕೆಗೊಳಿಸುವ ಆಟಗಳನ್ನೊ, ಯೋಗಾಭ್ಯಾಸವನ್ನೋ ಮಾಡದೆ ಮೊಬೈಲ್ ಗೇಮ್‌ಗಳಲ್ಲಿ ತೊಡಗಿರುವುದು.

* ಸೃಜನಶೀಲ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳದೆ ಕೇವಲ ಶಾಲಾ ಪಠ್ಯಪುಸ್ತಕಗಳಿಗೆ ಸೀಮಿತವಾಗಿ ತಮ್ಮ ಉತ್ತಮ ಹವ್ಯಾಸಗಳನ್ನು, ಕಲೆಗಳನ್ನು ಕಡೆಗಣಿಸುತ್ತಿರುವುದು.

* ಮಕ್ಕಳನ್ನು ಕೇವಲ ಹಣಕಾಸು ಅಭಿವೃದ್ಧಿಯ ಮಾನದಂಡದಲ್ಲಿ ಅಳೆದು ಅವರ ನಿಜವಾದ ಪ್ರತಿಭೆಗೆ ಉತ್ತೇಜಿಸದೆ ಕೇವಲ ಮಾರ್ಕ್ಸ್ ಕಾರ್ಡ್‌ಗಳಲ್ಲಿನ ರ್ಯಾಂಕ್‌ಗಳಾಗಿ ಪರಿಗಣಿಸುವ ಪಾಲಕರದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕುಂಠಿತವಾಗುವಲ್ಲಿ ಸಿಂಹಪಾಲಿದೆ.

* ಹಾರ್ಮೋನಲ್ ಬದಲಾವಣೆಗೆ ಅತೀವವಾಗಿ ತೆರೆದುಕೊಳ್ಳುವ ಈ ಕಾಲದಲ್ಲಿ ಮಾನಸಿಕವಾಗಿ ಮಕ್ಕಳನ್ನು ಭದ್ರಗೊಳಿಸುವಲ್ಲಿ ಅಜ್ಜ-ಅಜ್ಜಿ ಸ್ಪಂದನವಿಲ್ಲದೆ, ಹಿತವಚನಗಳಿಲ್ಲದ ವಿಭಕ್ತ ಕುಟುಂಬದ ಅವ್ಯವಸ್ಥೆಯೂ ಮಕ್ಕಳ ಮಾನಸಿಕ ಅಸಮತೋಲನಕ್ಕೆ ಕಾರಣವಾದೀತು.

* ದುಡಿಯಬೇಕು, ಗಳಿಸಬೇಕು, ಮುಂದಿನ ತಲೆಮಾರಿಗೊಂದಿಷ್ಟು ಉಳಿಸಬೇಕೆಂಬ ಮಾನಸಿಕತೆಯಲ್ಲಿ ಅನೇಕರು ತಮ್ಮ ಮಕ್ಕಳೊಂದಿಗೆ ಸುಸಮಯವನ್ನು ಕಳೆಯಲಾಗುತ್ತಿಲ್ಲ.

* ಸರಿಯಾದ ಸಮಯಪಾಲನೆ ಇಲ್ಲದೆ ತಡರಾತ್ರಿಯವರೆಗೆ ವ್ಯರ್ಥವಾಗಿ ಅನರ್ಥವನ್ನುಂಟುಮಾಡುವ ಸಂಗತಿಗಳಲ್ಲಿ ತೊಡಗಿ ಅಮೇಲೆ ನಿದ್ರಾಹೀನತೆಯಿಂದ ಬಳಲುವುದನ್ನು ಕಾಣುತ್ತೇವೆ.

* ಮಾಲಿನ್ಯಯುಕ್ತ ಪರಿಸರದಲ್ಲಿ ಸಕ್ಷಮವಾಗಿ ಜೀವಿಸಲು ಪೂರಕವಾದ ಅಂಗಾಂಗಗಳು ಸಾಕಷ್ಟು ಸೌಷ್ಟವವಾಗಿರದ ಕಾರಣ ಸಣ್ಣಪುಟ್ಟ ಖಾಯಿಲೆಗಳಿಗೂ ದವಾಖಾನೆಯ ಮೊರೆಹೋಗುವಂತಾಗಿ ಕೆಲವು ಬಾರಿ ಔಷಧಗಳ ಅಡ್ಡಪರಿಣಾಮಗಳಿಂದಲೂ ಆರೋಗ್ಯ ವ್ಯತ್ಯಯವಾಗುವುದಿದೆ.

* ಚಂಚಲಯುತವಾದ ಮನಸ್ಸಿನಿಂದ ಆಕರ್ಷಕಾವಾಗಿರುವ ಕಡೆಗೆ ಮನಸ್ಸು ಹರಿದು ಸಾಧಕ-ಬಾಧಕಗಳನ್ನು ವಿಮರ್ಶಿಸದೇ ದುಶ್ಚಟಗಳ ಅನುಕರಣೆಯಿಂದಾಗಿಯೂ ಅದರಿಂದಾಗುವ ಕ್ಷಣಿಕ ಸುಖಕ್ಕೆ ಮಾರುಹೋಗಿ ಶಾರೀರಿಕ ಹಾಗೂ ಮಾನಸಿಕ  ಅನಾರೋಗ್ಯಕ್ಕೆ ಉದಾಹರಣೆಯಂತಾಗುವ ಮಕ್ಕಳ ಮನೋವ್ಯಾಧಿಯನ್ನೂ ಅಲ್ಲಗಳೆಯುವಂತಿಲ್ಲ.

ಮಕ್ಕಳನ್ನು ಚಿಕ್ಕವಯಸ್ಸಿನಲ್ಲೆ ಒಳ್ಳೆಯ ಅಭ್ಯಾಸಗಳಿಗೆ ತೊಡಗಿಸಿದರೆ ಮುಂದೊದಗಿ ಬರಬಹುದಾದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿಡಲು ಸಾಧ್ಯವಾದೀತು. ಹಲವಾರು ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಯೋಗಾಭ್ಯಾಸ ಉತ್ತಮ ಪರಿಹಾರವಾದೀತಲ್ಲದೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಧೈರ್ಯವಾಗಿ ಸಾಧನೆಯೆಡೆಗೆ ಮುಂದಡಿಯಿಡಲು ಮತ್ತು ಏಕಾಗ್ರತೆಯಿಂದ ಉತ್ತಮ ಶ್ರೇಯಾಂಕವನ್ನು ಪಡೆದು ಕೀರ್ತಿಶಾಲಿಗಳಾಗಲು ಸಹಾಯವಾದೀತು.

ಯೋಗಾಭ್ಯಾಸ ಮಾಡುವಾಗ ವಿಶೇಷವಾಗಿ ಶ್ವಾಸೋಚ್ವಾಸ, ವಿನ್ಯಾಸ, ಸ್ಥಿತಿ, ದೃಷ್ಟಿಯಂತಹ ಸೂಕ್ಷ್ಮ ವಿಷಯಗಳ ಕುರಿತಾಗಿ ಅವಗಾಹನೆಯ ಅಗತ್ಯತೆ ಇರುವುದರಿಂದ ಮತ್ತು ಯೋಗ ಶಾಸ್ತ್ರದಲ್ಲಿ ತಲಸ್ಪರ್ಶಿ ಅಧ್ಯಯನ, ಅಭ್ಯಾಸವಿರುವ ಗುರುಗಳ ಆಯ್ಕೆ ಮಹತ್ವವನ್ನು ಪಡೆಯುತ್ತದೆ.

ಈ ಎಲ್ಲ ಪ್ರಯೋಜನಗಳನ್ನು ಮನಗಂಡು, ಯೋಗವನ್ನೇ ಜೀವನದ ಉಸಿರಾಗಿಸಿಕೊಂಡಿರುವ ಡಾ. ಸುಬ್ರಹ್ಮಣ್ಯ ಭಟ್ಟ ಅವರು ‘ಮಕ್ಕಳಿಗಾಗಿ ಯೋಗ’ ಬೇಸಿಗೆ ಶಿಬಿರವನ್ನು ಆನ್‌ಲೈನ್ ಮೂಲಕ ತಲುಪುವ ಕೈಂಕರ್ಯಕ್ಕೆ ಸಂಕಲ್ಪಿಸಿದ್ದಾರೆ.‌

ಎಪ್ರಿಲ್ 1ರಿಂದ ಶುಭಾರಂಭವಾಗುವ ಈ ಅಭ್ಯಾಸಕ್ರಮ ಮೇ 15ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಜರುಗಲಿದೆ. ನಿಜಾರ್ಥದಲ್ಲಿ ಈ ಆನ್‌ಲೈನ್‌ ಶಿಬಿರ ನಿಮ್ಮ ಮಕ್ಕಳಿಗಾಗಿ ನೀವು ಕೊಡಬಹುದಾದ ಅತ್ಯುತ್ತಮ ಉಡುಗೊರೆಗಳಲ್ಲೊಂದು. ಇನ್ನೇನಾದರೂ ವಿವರಗಳ ಅಗತ್ಯವಿದ್ದಲ್ಲಿ ನೇರವಾಗಿ

ಡಾ.ಸುಬ್ರಹ್ಮಣ್ಯ ಭಟ್ಟ, ಸುಯೋಗ ಶಾಲೆ, ಮೈಸೂರು ಇವರನ್ನು 8762200703 ದೂರವಾಣಿ ಮೂಲಕ ಸಂಪರ್ಕಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share