Friday, July 24, 2026
Join WhatsApp Group
HomeUncategorizedರಂಜಾನ್ ಹಬ್ಬದ ಪ್ರಯುಕ್ತ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ರಂಜಾನ್ ಹಬ್ಬದ ಪ್ರಯುಕ್ತ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಮೈಸೂರು : ರಂಜಾನ್ ಹಬ್ಬದ ಅಂಗವಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಯಿತು. ಪೊಲೀಸ್ ಉಪ ಅಧೀಕ್ಷಕರಾದ ರವಿ (ಹುಣಸೂರು ಉಪ ವಿಭಾಗ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ನಿರೀಕ್ಷಕರಾದ ಗೋವಿಂದ್ ರಾಜ್ ಎಂ.ವಿ., ಪಿಎಸ್ಐ ಜಗದೀಶ್ ಭಾರತಿ ಹಾಗೂ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಭೆಗೆ ಸ್ಥಳೀಯ ಮುಸ್ಲಿಂ ಮುಖಂಡರನ್ನು ಆಹ್ವಾನಿಸಿ, ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದರು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಸಹಕಾರದಿಂದ ಹಬ್ಬವನ್ನು ನೆರವೇರಿಸಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮೇದರ್ ಬ್ಲಾಕ್‌ನ ಜನ್ನತುಲ್ ಫಿರ್ದೋಸ್ ಮಸೀದಿಗೆ ಸಂಬಂಧಿಸಿದ ಎರಡು ಗುಂಪಿನವರೊಂದಿಗೆ ಪೊಲೀಸ್ ಉಪ ಅಧೀಕ್ಷಕರು ವಿಶೇಷವಾಗಿ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿಗಳ ಆದೇಶದಂತೆ ದಿನನಿತ್ಯದ ಐದು ಸಮಯದ ನಮಾಜ್ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ತಿಳಿಸಿದರು.
ಮಸೀದಿ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಪರಸ್ಪರ ಸಹಕಾರ ಅಗತ್ಯವೆಂದು ಸೂಚಿಸಿದ ಅಧಿಕಾರಿಗಳು, ನಿಯಮ ಉಲ್ಲಂಘನೆಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share