Friday, July 24, 2026
Join WhatsApp Group
HomeCrimeಹಣವೂ ಇಲ್ಲ, ಯೋಜನೆಯೂ ಇಲ್ಲ | ಗ್ರಾ.ಪಂ ಸಿಬ್ಬಂದಿ ವಿರುದ್ಧ ಪ್ರಕರಣ

ಹಣವೂ ಇಲ್ಲ, ಯೋಜನೆಯೂ ಇಲ್ಲ | ಗ್ರಾ.ಪಂ ಸಿಬ್ಬಂದಿ ವಿರುದ್ಧ ಪ್ರಕರಣ

ಮುಂಡಗೋಡ: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತಗೌಡ ಪಾಟೀಲ್, ಗಂಗಾ ಕಲ್ಯಾಣ ಯೋಜನೆ, ವಿಧವಾ ವಸತಿ ಗೃಹ, ಆಶ್ರಯ ಯೋಜನೆ, ಅಂಗವಿಕಲ ವಿವಾಹ ಪ್ರೋತ್ಸಾಹಧನ ಹಾಗೂ ಅಲ್ಪಸಂಖ್ಯಾತರ ಯೋಜನೆಗಳಡಿ ಸೌಲಭ್ಯ ನೀಡುವುದಾಗಿ ಭರವಸೆ ನೀಡಿ ಜನರಿಂದ ಹಣ ವಸೂಲಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಫಿರ್ಯಾದಿದಾರ ಫಕ್ಕಿರೇಶ ಜಾಧವ ಅವರಿಂದ ಹಂತ ಹಂತವಾಗಿ 1.50 ಲಕ್ಷ ರೂ ಪಡೆದುಕೊಂಡಿರುವುದಲ್ಲದೆ, ಇತರರಿಂದಲೂ ಹಣ ವಸೂಲಿ ಮಾಡಲಾಗಿದೆ. ಚನ್ನಬಸವ್ವ, ಪತ್ತೆಸಾಬ್ ಬೆಲವಂತರ, ಚಂದ್ರಕಲಾ ಬಾಗಾಯಿ, ಇಮ್ತಿಯಾಜ್ ಅಹಮ್ಮದ್, ರಮೇಶ್ ಹಡಪದ, ಪಕ್ಕಿರೇಶ ಹಾಗೂ ಬಸವರಾಜ ಹರಿಜನ ಸೇರಿದಂತೆ ಹಲವರಿಂದ ಒಟ್ಟು ಸುಮಾರು 3.94 ಲಕ್ಷ ರೂ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಹಣ ಪಡೆದುಕೊಂಡಿದ್ದರೂ ಯಾವುದೇ ಯೋಜನೆಯ ಸೌಲಭ್ಯ ಒದಗಿಸದೆ, ಹಣವನ್ನೂ ಹಿಂದಿರುಗಿಸದೇ ವಂಚನೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share