Friday, July 24, 2026
Join WhatsApp Group
HomeLocal Newsಯಲ್ಲಾಪುರದಲ್ಲಿ ಉಚಿತ ಜ್ಯೋತಿಷ್ಯ ಕಲಿಕಾ ಶಿಬಿರ

ಯಲ್ಲಾಪುರದಲ್ಲಿ ಉಚಿತ ಜ್ಯೋತಿಷ್ಯ ಕಲಿಕಾ ಶಿಬಿರ

ಯಲ್ಲಾಪುರ: ಭಾರತೀಯ ಕಾಲವಿಧಿ ಶಾಸ್ತ್ರ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಮೇ 21ರಿಂದ 24ರವರೆಗೆ ನಾಲ್ಕು ದಿನಗಳ ಉಚಿತ ಜ್ಯೋತಿಷ್ಯ ಕಲಿಕಾ ಶಿಬಿರ ಆಯೋಜಿಸಲಾಗಿದೆ.

ಯಲ್ಲಾಪುರದ ನಾಯ್ಕನಕೆರೆಯ ಶಾರದಾಂಬಾ ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 4ರಿಂದ 6.15ರವರೆಗೆ ಶಿಬಿರ ನಡೆಯಲಿದೆ. ವಿದ್ವಾನ್ ಸತೀಶ ಸುಬ್ರಾಯ ಭಟ್ಟ ಗುಂಡ್ಯಾನಕೊಪ್ಪ ಅವರು ಶಿಬಿರವನ್ನು ನಿರ್ವಹಿಸಲಿದ್ದಾರೆ.

ಶಿಬಿರದಲ್ಲಿ ಪಂಚಾಂಗ ಪಠಣ, ಜನನ ಸಮಯಕ್ಕೆ ಅನುಗುಣವಾಗಿ ಜಾತಕ ರಚನೆ, ಪಂಚಮಾರಿಷ್ಟ, ಬಾಲಾರಿಷ್ಟ ಹಾಗೂ ದಶಾಸಂಧಿ ನಿರ್ಣಯ ಕುರಿತು ತರಬೇತಿ ನೀಡಲಾಗುತ್ತದೆ. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಆಧಾರ ಸಹಿತವಾಗಿ ವಿಮರ್ಶಾತ್ಮಕವಾಗಿ ವಿಷಯ ಬೋಧಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಎಲ್ಲಾ ವಯಸ್ಸಿನ ಸ್ತ್ರೀ-ಪುರುಷರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸಲು ಇಚ್ಛಿಸುವವರು ವಾಟ್ಸಪ್ ಮೂಲಕ 9741258892 ಸಂಖ್ಯೆಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್ ಪಾಠ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share