Saturday, May 30, 2026
HomeUncategorizedಸಿಡಿಲು ಬಡಿದು ಮಹಿಳೆ ಸಾವು,ಎರಡು ಹಸುಗಳೂ ಬಲಿ – ಸತ್ಯಗಾಲ ಗ್ರಾಮದಲ್ಲಿ ದುರ್ಘಟನೆ

ಸಿಡಿಲು ಬಡಿದು ಮಹಿಳೆ ಸಾವು,ಎರಡು ಹಸುಗಳೂ ಬಲಿ – ಸತ್ಯಗಾಲ ಗ್ರಾಮದಲ್ಲಿ ದುರ್ಘಟನೆ

ಜಮೀನಿನಲ್ಲಿ ಹಸುಗಳನ್ನು ಕರೆತರಲು ತೆರಳಿದ್ದ ವೇಳೆ ಅವಘಡ – ಕುಟುಂಬದಲ್ಲಿ ಆಕ್ರಂದನ, ಇಬ್ಬರು ಹೆಣ್ಣು ಮಕ್ಕಳು ಅನಾಥರು

ಮೈಸೂರು :ಪಿರಿಯಾಪಟ್ಟಣ: ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಯ ನಡುವೆ ಸಿಡಿಲು ಬಡಿದು ಮಹಿಳೆಯೊಬ್ಬರು ಹಾಗೂ ಎರಡು ಹಸುಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತ ಮಹಿಳೆಯನ್ನು ವಿನೋದ್ ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಆಲನಹಳ್ಳಿ ಗ್ರಾಮದ ದೊಡ್ಡ ಸೋಮಾಚಾರ ಅವರ ಪುತ್ರಿಯಾಗಿದ್ದಾರೆ. ವಿವಾಹವಾದ ಬಳಿಕ ಸತ್ಯಗಾಲ ಗ್ರಾಮದಲ್ಲಿ ವಾಸವಾಗಿದ್ದರು.ಶನಿವಾರ ತಮ್ಮ ಜಮೀನಿನಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳನ್ನು ಕರೆತರಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಸಿಡಿಲು ಬಡಿದ ಪರಿಣಾಮ ವಿನೋದ್ ಹಾಗೂ ಎರಡು ಹಸುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಘಟನೆ ಕುಟುಂಬಸ್ಥರಲ್ಲಿ ಆಕ್ರಂದನ ಮೂಡಿಸಿದೆ.ಈ ಸಂಬಂಧ ಮೃತರ ಪತಿ ಚಿತ್ರಶೇಖರ್ ಅವರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆ ಸಮೀಪದ ಶವಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share