Monday, September 7, 2026
Join WhatsApp Group
HomeCrimeಕಾಡಿನಲ್ಲಿ ಅಂದರ್-ಬಾಹರ್; 16 ಮಂದಿ ವಿರುದ್ಧ ಪ್ರಕರಣ

ಕಾಡಿನಲ್ಲಿ ಅಂದರ್-ಬಾಹರ್; 16 ಮಂದಿ ವಿರುದ್ಧ ಪ್ರಕರಣ

ಶಿರಸಿ: ತಾಲೂಕಿನ ತಾರಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಗೋಡ ಗ್ರಾಮದ ಸಮೀಪದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ಶಿರಸಿ ಗ್ರಾಮೀಣ ಪೊಲೀಸರು ದಾಳಿ ನಡೆಸಿ, ₹60,400 ನಗದು ಸೇರಿದಂತೆ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡು 16 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜುಲೈ 5ರಂದು ಸಂಜೆ ಸುಮಾರು 6.10 ಗಂಟೆಗೆ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಹಣ ಪಣಕ್ಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ದಾಳಿಯ ವೇಳೆ ₹60,400 ನಗದು, 52 ಇಸ್ಪೀಟ್ ಎಲೆಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಮಂಜು ಮಾಚಾ ಪೂಜಾರಿ ನಿಡಗೋಡ,

ಆನಂದ ಸುಬ್ರಾಯ ನಾಯ್ಕ ಬೊಪ್ಪನಳ್ಳಿ, ಮಾದೇವ  ಚನ್ನಾ ಪೂಜಾರ ದಾನಂದಿ, ಹನುಮಂತ ಗೋವಿಂದ ಪೂಜಾರಿ ಹಲಸಗಿ-ತುಡುಗುಣಿ, ದುರ್ಗಾ ಮಾಚಾ ಪೂಜಾರಿ ನಿಡಗೋಡ, ಮಂಜುನಾಥ ವೆಂಕಟ ಬಿಲ್ಲವ ತುಡುಗುಣಿ, ಭಾಸ್ಕರ ಸುಬ್ಬಾ ದೇವಾಡಿಗ ಹಿತ್ಲಳ್ಳಿ, ಸೀನಾ ಮಂಜು ಪೂಜಾರಿ ಗೇರಮನೆ, ಹಿರಿಯ ಶೇಷಾ ಪೂಜಾರಿ ಹುಲೇಕಲ್, ಗಣಪತಿ ವೆಂಕಟ ಪೂಜಾರಿ ತುಡುಗುಣಿ, 

ಸುಬ್ರಾಯ ತಿಮ್ಮಪ್ಪ ಪೂಜಾರಿ ಕಲಕೈ, ರುದ್ರ ಶಿವು ಗೌಡ ಸದಾಶಿವಳ್ಳಿ, ಮಂಜು ಶೇಷಾ ಪೂಜಾರಿ ಮುಂಡಗೆಹಳ್ಳ, ವೆಂಕಟ್ರಮಣ ಈಶ್ವರ ಗೌಡ ದಾನಂದಿ, ಚಂದ್ರಶೇಖರ ನಾಗಾ ನಾಯ್ಕ ಬೊಪ್ಪನಳ್ಳಿ, ಕೃಷ್ಣ ತಿಪ್ಪಯ್ಯ ನಾಯ್ಕ  ಮಾವಿನಸರ ಆರೋಪಿಗಳಾಗಿದ್ದಾರೆ.

ಶಿರಸಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಂ. ಸರ್ಕಾರದ ಪರವಾಗಿ ನೀಡಿದ ದೂರಿನ ಮೇರೆಗೆ, ನ್ಯಾಯಾಲಯದ ಅನುಮತಿ ಪಡೆದ ಬಳಿಕ ಜುಲೈ 6ರಂದು  ಪ್ರಕರಣ ದಾಖಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share