ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ
ಮುಂಡಗೋಡ: ಮುಂಡಗೋಡ ತಾಲೂಕಿನ ಕಾತೂರ ವಲಯದ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯ ಸ್ಟಾಫ್ ರೂಮ್‌ನಲ್ಲಿ ನಾಗರಹಾವು ಕಾಣಿಸಿಕೊಂಡ ಘಟನೆ ಆತಂಕ ಮೂಡಿಸಿದರೂ, ಅರಣ್ಯ ಇಲಾಖೆ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಶಾಲೆಯ ಸ್ಟಾಫ್ ರೂಮ್‌ನಲ್ಲಿದ್ದ ಗೋದ್ರೇಜ್ ಕಪಾಟಿನ ಕೆಳಭಾಗದಲ್ಲಿ ನಾಗರಹಾವು ಇರುವುದನ್ನು ಗಮನಿಸಿದ ಅಭಿಷೇಕ್ ಬೋವಿವಡ್ಡರ ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಕೂಡಲೇ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಸ್ಥಳಕ್ಕೆ ಧಾವಿಸಿ ನಾಗರಹಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹಿಡಿದು ರಕ್ಷಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಅರಿವು ಮೂಡಿಸಿ, ಅವುಗಳ ಮಹತ್ವ ಹಾಗೂ ಹಾವು ಕಂಡಾಗ ಹೇಗೆ ವರ್ತಿಸಬೇಕು ಎಂಬ ಕುರಿತು ಮಾಹಿತಿ ನೀಡಿದರು.
ನಂತರ ನಾಗರಹಾವನ್ನು ಸಮೀಪದ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ನಯನಾ ಭಂಡಾರಿ, ಶಿವಕುಮಾರ (ಕೆಇಬಿ) ಮಳಗಿ, ರೋಹಿತ್, ಅಭಿಷೇಕ್, ಕಾವ್ಯ, ಪವಿತ್ರ, ದಿವ್ಯಾ, ಸುನಂದಾ, ಸಕ್ಕುಭಾಯಿ, ದೊಡ್ಡೇಶ್, ಬಾಳಪ್ಪ, ಕೀರ್ತಿ ಹಾಗೂ ಉಷಾ ಇದ್ದರು.
ʻಹಾವಿನ ಬಗ್ಗೆ ಅನಗತ್ಯ ಭಯ ಬೇಡ. ಆದರೆ ಅಗತ್ಯ ಮುನ್ನೆಚ್ಚರಿಕೆ ಮತ್ತು ಜಾಗ್ರತೆ ಅತ್ಯಗತ್ಯ ಎಂದು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.