ಕಾರವಾರ: ಮಳೆಗಾಲದಲ್ಲಿ ಅಂಗಡಿಯೊಳಗೆ ನೀರು ಸೋರುವ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಕಾರವಾರ ಮುಖ್ಯರಸ್ತೆಯ ಚರ್ಮಕಾರ ಕುಟೀರ (ಚಪ್ಪಲಿ ಹೊಲಿಯುವ ಅಂಗಡಿ)ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಸಂತೋಷ ನಾಯ್ಕ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಶೀಟ್ ಅಳವಡಿಸಿ ನೆರವಾಗಿದ್ದಾರೆ.
ಮಳೆ ಬಂದಾಗ ಮಳೆ ನೀರು ನೇರವಾಗಿ ಅಂಗಡಿಯೊಳಗೆ ಬಂದು, ಕೆಲಸ ನಿರ್ವಹಿಸಲು ತೀವ್ರ ತೊಂದರೆಯಾಗುತ್ತಿದೆ. ಅಂಗಡಿಗೆ ಶೀಟ್ ಅಳವಡಿಸಿಕೊಡುವಂತೆ ಚರ್ಮಕಾರರು ರೂಪಾಲಿ ನಾಯ್ಕ ಅವರಲ್ಲಿ ಮನವಿ ಮಾಡಿದ್ದರು.
ಅವರ ಮನವಿಗೆ ಸ್ಪಂದಿಸಿದ ರೂಪಾಲಿ ನಾಯ್ಕ, ತಮ್ಮ ಸ್ವಂತ ಖರ್ಚಿನಲ್ಲಿ ಅಂಗಡಿಗೆ ಶೀಟ್ ಅಳವಡಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ.
ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿರುವ ಚರ್ಮಕಾರರು, ಮಳೆಗಾಲದಲ್ಲಿ ತಮ್ಮ ಜೀವನೋಪಾಯಕ್ಕೆ ಎದುರಾಗಿದ್ದ ಸಮಸ್ಯೆಯನ್ನು ನಿವಾರಿಸಿದ ರೂಪಾಲಿ ನಾಯ್ಕ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.