Monday, September 7, 2026
Join WhatsApp Group
HomeLocal Newsರೀಲ್ಸ್ ಮಾಡಿ, ಪ್ರಶಸ್ತಿ ಗೆಲ್ಲಿ

ರೀಲ್ಸ್ ಮಾಡಿ, ಪ್ರಶಸ್ತಿ ಗೆಲ್ಲಿ

ಸೈಬರ್ ವಂಚನೆ ತಡೆಗೆ ವಿಡಿಯೋ ಸ್ಪರ್ಧೆ

ಕಾರವಾರ: ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ. ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಸೃಜನಶೀಲತೆಯ ಮೂಲಕ ಸೈಬರ್ ಸುರಕ್ಷತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಬಹುದು.

ವಿಡಿಯೋ ಗರಿಷ್ಠ 90 ಸೆಕೆಂಡ್‌ಗಳೊಳಗೆ ಇರಬೇಕು. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ವಿಡಿಯೋ ಸಿದ್ಧಪಡಿಸಬಹುದಾಗಿದ್ದು, Full HD (1080p) ಗುಣಮಟ್ಟ ಹೊಂದಿರಬೇಕು. ವಿಡಿಯೋ ಸ್ವಂತ ಸೃಷ್ಟಿಯಾಗಿರಬೇಕು ಹಾಗೂ ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಅಶ್ಲೀಲ, ಅವಹೇಳನಕಾರಿ, ರಾಜಕೀಯ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವಿಷಯಗಳಿಗೆ ಅವಕಾಶವಿಲ್ಲ.

ಫಿಶಿಂಗ್ ಲಿಂಕ್‌ಗಳು, ಆನ್‌ಲೈನ್ ವಂಚನೆ, ಆನ್‌ಲೈನ್ ಶಾಪಿಂಗ್ ವಂಚನೆ, ಅಪರಿಚಿತ ಇ-ಮೇಲ್ ಮತ್ತು ಲಿಂಕ್‌ಗಳಿಂದ ದೂರವಿರುವುದು, OTP ಹಂಚಿಕೊಳ್ಳದಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರನ್ನು ನಂಬದಿರುವುದು, ಸುರಕ್ಷಿತ ಡಿಜಿಟಲ್ ಪಾವತಿ, ಬಲವಾದ ಪಾಸ್‌ವರ್ಡ್ ಬಳಕೆ ಸೇರಿದಂತೆ ಸೈಬರ್ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ವಿಡಿಯೋದಲ್ಲಿ ಒಳಗೊಳ್ಳಬಹುದಾಗಿದೆ.

ಸ್ಪರ್ಧಿಗಳು ತಮ್ಮ ವಿಡಿಯೋಗಳನ್ನು Instagram Reel, Facebook Reel ಅಥವಾ YouTubeನಲ್ಲಿ ಪ್ರಕಟಿಸಬಹುದಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ #CyberSafety #CyberAwareness2026 #UKDistrictPolice ಹ್ಯಾಶ್‌ಟ್ಯಾಗ್‌ಗಳನ್ನು ಬಳಸಬೇಕು. ಜೊತೆಗೆ Uttara Kannada District Police ಅನ್ನು ಟ್ಯಾಗ್ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಡಿಯೋ ಲಿಂಕ್ ಅಥವಾ ಮಾಹಿತಿಯನ್ನು ಜಿಲ್ಲಾ ಸೋಶಿಯಲ್ ಮೀಡಿಯಾ ಸೆಲ್‌ನ 8277988311 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.
ಸೆಪ್ಟೆಂಬರ್ 20, 2026 ಸ್ಪರ್ಧೆಗೆ ವಿಡಿಯೋ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ವಿಡಿಯೋಗಳ ಮೌಲ್ಯಮಾಪನದಲ್ಲಿ ಸಾಮಾಜಿಕ ಜಾಗೃತಿ ಹಾಗೂ ಸಂದೇಶ, ವಿಷಯದ ಪ್ರಸ್ತುತತೆ ಮತ್ತು ಪ್ರಭಾವ, ಸೃಜನಶೀಲತೆ ಹಾಗೂ ಕಥಾವಸ್ತು, ವಿಡಿಯೋ ಗುಣಮಟ್ಟ ಮತ್ತು ಪ್ರಸ್ತುತಿ ಹಾಗೂ ಸಾರ್ವಜನಿಕ ಸ್ಪಂದನೆಗೆ (Like, Views, Share, Engagement) ತಲಾ 20 ಅಂಕಗಳಂತೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿದೆ.

ಅತ್ಯುತ್ತಮ ವಿಡಿಯೋಗಳಿಗೆ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಆಯ್ಕೆಯಾಗುವ ಅತ್ಯುತ್ತಮ ವಿಡಿಯೋಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರಲಿದೆ.


“ಜಾಗರೂಕರಾಗಿರಿ, ಸುರಕ್ಷಿತರಾಗಿರಿ, ಸೈಬರ್ ಅಪರಾಧ ತಡೆಯಿರಿ” ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share