ಹೊನ್ನಾವರ: ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಹೊಂದಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗಾಂಜಾ ನೀಡಿದ ಆರೋಪದ ಮೇಲೆ ಮತ್ತೊಬ್ಬನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ದಾಖಲೆಯ ಪ್ರಕಾರ, ಭಟ್ಕಳದ ಹೆಬಳೆ ಫಿರ್ದೋಸ್ ನಗರದ ಅಬ್ರಾರ್ ಮೋಹಿದ್ದಿನ್ ಶೇಖ್ (24), ವೃತ್ತಿಯಲ್ಲಿ ಚಾಲಕ, ಸೆ.8ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ ಕಾಸರಕೋಡ ರೋಷನ್ ಮೊಹಲ್ಲಾದ ಶ್ಯಾನಭಾಗ ರೆಸಿಡೆನ್ಸಿ ಬಸ್ ತಂಗುದಾಣದ ಬಳಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಗಾಂಜಾ ಹೊಂದಿದ್ದ ಆರೋಪ ಎದುರಿಸುತ್ತಿದ್ದಾನೆ.
ಪೊಲೀಸರು ದಾಳಿ ನಡೆಸಿದ ವೇಳೆ ಅಬ್ರಾರ್ ಬಳಿಯಿಂದ ಒಟ್ಟು 112.61 ಗ್ರಾಂ ತೂಕದ, ಸುಮಾರು 5 ಸಾವಿರ ರೂ ಮೌಲ್ಯದ ಗಾಂಜಾ ಇರುವ ಪ್ಲಾಸ್ಟಿಕ್ ಕವರ್ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ₹160 ನಗದು ಹಾಗೂ ಕಪ್ಪು-ನೀಲಿ ಬಣ್ಣದ ಒಂದು ಹ್ಯಾಂಡ್ ಬ್ಯಾಗ್‌ನ್ನೂ ವಶಕ್ಕೆ ಪಡೆಯಲಾಗಿದೆ.
ವಿಚಾರಣೆ ವೇಳೆ, ಬದ್ರಿಯಾ ಕಾಲೋನಿ, ಭಟ್ಕಳದ ಫೈಜಾನ್ ಎಂಬಾತ ಗಾಂಜಾವನ್ನು ಮಾರಾಟ ಮಾಡಲು ಅಬ್ರಾರ್‌ಗೆ ನೀಡಿದ್ದರು ಎಂದು ಅಬ್ರಾರ್ ತಿಳಿಸಿರುವುದಾಗಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಮಂಜುನಾಥ್ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.