Monday, September 7, 2026
Join WhatsApp Group
HomeInformationಅಮೆಜಾನ್ ಕಾಡಿನ ಜೀವಂತ ಟೈಮ್ ಬಾಂಬ್!

ಅಮೆಜಾನ್ ಕಾಡಿನ ಜೀವಂತ ಟೈಮ್ ಬಾಂಬ್!

‘ಬೊಂಬಾರ್ಡಿಯರ್ ಬೀಟಲ್’ನ ರೋಚಕ ಕಥೆ

– ಎಂ‌.ಕೆ. ಗೌಡ.

​ಅಮೆಜಾನ್ ಕಾಡು ಅಂದ್ರೆ ಬರೀ ಜಾಗ್ವಾರ್, ಅನಕೊಂಡ, ಮೊಸಳೆಗಳಂತಹ ದೊಡ್ಡ ಪ್ರಾಣಿಗಳಷ್ಟೇ ಅಪಾಯಕಾರಿ ಅಂತ ಅಂದುಕೊಂಡಿದ್ರೆ ನಿಮ್ಮ ಲೆಕ್ಕಾಚಾರ ಉಲ್ಟಾ ಆಗುತ್ತೆ. ಅಲ್ಲಿನ ದಟ್ಟವಾದ ಕಾಡಿನಲ್ಲಿ ‘ಬೊಂಬಾರ್ಡಿಯರ್ ಬೀಟಲ್’ ಅನ್ನೋ ಒಂದು ಸಣ್ಣ ಜೀರುಂಡೆ ಇದೆ. ಇದೊಂದು ಜೀವಂತ ‘ಬಯೋಲಾಜಿಕಲ್ ಟೈಮ್ ಬಾಂಬ್’ ಅಂದ್ರೆ ತಪ್ಪಾಗಲ್ಲ. ಇದರ ಬದುಕುವ ಆಟ ಮತ್ತು ಆ ಕೆಮಿಕಲ್ ಬ್ಲಾಸ್ಟ್‌ನ ಕಥೆ ನಿಜಕ್ಕೂ ಮೈ ಜುಮ್ ಅನ್ನುವಂತಿದೆ.

ಪ್ರಕೃತಿ ಇದಕ್ಕೆ ಎಂಥಾ ವೆಪನ್ ಕೊಟ್ಟಿದೆ ಅಂದ್ರೆ, ಇದರ ಹೊಟ್ಟೆಯ ಹಿಂಭಾಗದಲ್ಲಿ ಎರಡು ಬೇರೆ ಬೇರೆ ಟ್ಯಾಂಕ್‌ಗಳಿರುತ್ತವೆ. ಒಂದರಲ್ಲಿ ‘ಹೈಡ್ರೋಕ್ವಿನೋನ್’  ಮತ್ತು ಇನ್ನೊಂದರಲ್ಲಿ ‘ಹೈಡ್ರೋಜನ್ ಪೆರಾಕ್ಸೈಡ್’  ಅನ್ನೋ ಡೆಡ್ಲಿ ಕೆಮಿಕಲ್ಸ್ ತುಂಬಿರುತ್ತೆ. ನಾರ್ಮಲ್ ಟೈಮ್‌ನಲ್ಲಿ ಇವೆರಡೂ ಸಪರೇಟ್ ಆಗಿ, ಯಾವುದೇ ರಿಯಾಕ್ಷನ್ ಇಲ್ಲದೆ ಬಹಳ ಸೇಫ್ ಆಗಿರುತ್ತವೆ.

​ಆದ್ರೆ, ಯಾವುದಾದ್ರೂ ಇರುವೆ, ಜೇಡ ಅಥವಾ ಕಪ್ಪೆ ಈ ಬೀಟಲ್‌ನ ಬೇಟೆಯಾಡೋಕೆ  ಹತ್ತಿರ ಬರುತ್ತೋ… ಆಗ ಅಸಲಿ ಆಟ ಶುರುವಾಗುತ್ತೆ! ಈ ಬೀಟಲ್ ಆ ಎರಡು ಕೆಮಿಕಲ್‌ಗಳನ್ನ ತನ್ನ ಹೊಟ್ಟೆಯೊಳಗಿರೋ ‘ಕಂಬಶನ್ ಚೇಂಬರ್’ (ಬ್ಲಾಸ್ಟ್ ಆಗೋ ಜಾಗ)ಗೆ ತಳ್ಳುತ್ತೆ. ಅಲ್ಲಿ ಕೆಲವು ಎಂಜೈಮ್ಸ್ ಮಿಕ್ಸ್ ಆದ ತಕ್ಷಣ… ‘ಬೂಮ್’!

ಆ ಕೆಮಿಕಲ್ ರಿಯಾಕ್ಷನ್ ಎಷ್ಟು ಡೇಂಜರ್ ಆಗಿರುತ್ತೆ ಅಂದ್ರೆ, ಆ ಮಿಕ್ಸ್ಚರ್ ಡೈರೆಕ್ಟ್ ಆಗಿ 100°C (ನೀರು ಕುದಿಯುವ ಟೆಂಪರೇಚರ್) ತಲುಪುತ್ತೆ! ಮೈಯೊಳಗೇ ಆ ಆಸಿಡ್ ಕುದಿಯೋಕೆ ಶುರುವಾಗಿ, ಒಂಥರಾ ಗನ್ ಫೈರ್ ಆದಾಗ ‘ಪಟಾಕ್’ ಅಂತ ಸೌಂಡ್ ಬರೋ ಹಾಗೆ, ತನ್ನ ಹಿಂಭಾಗದಿಂದ ಆ ಕುದಿಯುವ ವಿಷಕಾರಿ ಆಸಿಡ್ ಅನ್ನು ಹೊಗೆಯ ಜೊತೆಗೆ ಶತ್ರುವಿನ ಮುಖದ ಮೇಲೆ ಸ್ಪ್ರೇ ಮಾಡುತ್ತೆ.

​ಇದರ ಟಾರ್ಗೆಟ್ ಹೆಂಗಿರುತ್ತೆ ಅಂದ್ರೆ, ಪಕ್ಕಾ ಸ್ನೈಪರ್  ಥರ! ಆ ಆಸಿಡ್ ಸ್ಪ್ರೇ ಮಾಡುವ ‘ನಾಝಲ್’ (ತುದಿ) ಅನ್ನು ಯಾವ ಡೈರೆಕ್ಷನ್‌ಗೆ ಬೇಕಾದರೂ ತಿರುಗಿಸಬಲ್ಲ ತಾಕತ್ತು ಇದಕ್ಕಿದೆ. ಶತ್ರು ಯಾವ ಕಡೆಯಿಂದ ಬಂದರೂ ಸರಿ, ಪಕ್ಕಾ ಲೆಕ್ಕಾಚಾರ ಹಾಕಿ ಮುಖಕ್ಕೇ ಆಸಿಡ್ ಎರಚುತ್ತೆ. ಆ ಕುದಿಯುವ ಆಸಿಡ್ ಬಿದ್ದ ತಕ್ಷಣ ಎದುರಾಳಿ ಹುಳುಗಳು ಅಥವಾ ಜೇಡಗಳು ಅಕ್ಷರಶಃ ಸುಟ್ಟು ಕರಕಲಾಗಿ ಸಾಯುತ್ತವೆ ಇಲ್ಲವೇ ಪ್ರಾಣ ಉಳಿಸಿಕೊಂಡು ಓಡಿಹೋಗುತ್ತವೆ.

ಈ ಬೊಂಬಾರ್ಡಿಯರ್ ಬೀಟಲ್‌ನ ಅತಿ ದೊಡ್ಡ ಮ್ಯಾಜಿಕ್ ಅಂದ್ರೆ ಇದರ ಸರ್ವೈವಲ್ ಗೇಮ್. ಕೆಲವೊಮ್ಮೆ ದೊಡ್ಡ ಕಪ್ಪೆಗಳು ಇದನ್ನ ಟಾರ್ಗೆಟ್ ಮಾಡಿ, ಇದು ಆಸಿಡ್ ಬಿಡೋಕೂ ಮುಂಚೆನೇ ಡೈರೆಕ್ಟ್ ಆಗಿ ಬಾಯಿಗೆ ಹಾಕಿ ನುಂಗಿಬಿಡುತ್ತವೆ. ಜೀರುಂಡೆ ಕಪ್ಪೆಯ ಹೊಟ್ಟೆ ಸೇರಿತು, ಜೀರ್ಣ ಆಗೋಯ್ತು ಅಂತ ನಾವು ಅಂದುಕೊಳ್ತೀವಿ.

​ಆದ್ರೆ ಕಪ್ಪೆಯ ಹೊಟ್ಟೆಯೊಳಗೆ ಹೋದಮೇಲೂ ಈ ಬೀಟಲ್ ಸುಮ್ಮನೆ ಕೂರಲ್ಲ. ಆ ಕಗ್ಗತ್ತಲ ಹೊಟ್ಟೆಯೊಳಗೇ ತನ್ನ ಕೆಮಿಕಲ್ ಬಾಂಬ್ ಆನ್ ಮಾಡಿ, ಕಪ್ಪೆಯ ಹೊಟ್ಟೆಯೊಳಗೆ 100°C ಕುದಿಯುವ ಆಸಿಡ್ ಅನ್ನು ಬಿಡೋಕೆ ಶುರು ಮಾಡುತ್ತೆ. ಕಪ್ಪೆಗೆ ಭಾರಿ ಬಿಸಿ ತಟ್ಟಿ, ಒಳಗಡೆ ಆ ಕುದಿಯುವ ಆಸಿಡ್ ತಾಳಲಾರದೆ, ಎಷ್ಟೋ ಬಾರಿ ತಾನು ನುಂಗಿದ್ದ ಈ ಬೀಟಲ್ ಅನ್ನು ವಾಮಿಟ್ ಆಗಿ ಹೊರಗೆ ಉಗುಳುತ್ತೆ! ಆಶ್ಚರ್ಯ ಅಂದ್ರೆ, ಕಪ್ಪೆಯ ಹೊಟ್ಟೆಯಿಂದ ಹೊರಬಂದ ಮೇಲೂ ಈ ಬೀಟಲ್ ಒಂದು ಚೂರು ಡ್ಯಾಮೇಜ್ ಆಗದೆ ತನ್ನ ಪಾಡಿಗೆ ತಾನು ಆರಾಮಾಗಿ ನಡೆದುಕೊಂಡು ಎಸ್ಕೇಪ್ ಆಗುತ್ತೆ.

​ಅಮೆಜಾನ್ ಕಾಡು ಅಂದ್ರೆ ಸುಮ್ನೆನಾ! ಅಲ್ಲಿರೋ ಒಂದೊಂದು ಸಣ್ಣ ಹುಳುವಿನ ಮೈಯೊಳಗೂ ಒಂದೊಂದು ಡೆಡ್ಲಿ ವೆಪನ್ ಅಡಗಿರುತ್ತೆ. ತನ್ನ ಪ್ರಾಣ ಉಳಿಸಿಕೊಳ್ಳೋಕೆ ತನ್ನ ಮೈಯೊಳಗೇ ಬಾಂಬ್ ಬ್ಲಾಸ್ಟ್ ಮಾಡಿಕೊಳ್ಳೋ ಈ ನೇಚರ್‌ನ  ಟೆಕ್ನಾಲಜಿ ನಿಜಕ್ಕೂ ಆಶ್ಚರ್ಯ ಅಲ್ವಾ?!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share