ಯಲ್ಲಾಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ ಯಲ್ಲಾಪುರ ಇವರ ವತಿಯಿಂದ ದಿ. ಸತೀಶ್ ಕಟ್ಟಿಗೆ ಅವರ 4ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಗಸ್ಟ್ 10, 2026ರಂದು ಆಯೋಜಿಸಲಾಗಿದೆ.
ಶಾ. ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆಯಲಿರುವ ಶಿಬಿರವು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಯಲ್ಲಾಪುರದ ಅಡಿಕೆ ಭವನದಲ್ಲಿ ನಡೆಯಲಿದೆ.
ಶಿಬಿರಕ್ಕೆ ವಿಶ್ವದರ್ಶನ ಸೇವಾ (ರಿ.), ಟಿ.ಎಂ.ಎಸ್. ಯಲ್ಲಾಪುರ ಹಾಗೂ ಅಡಿಕೆ ವ್ಯವಹಾರಸ್ಥರ ಸಂಘ ಯಲ್ಲಾಪುರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡುತ್ತಿವೆ. ʻರಕ್ತದಾನ ಮಾಡಿ, ಜೀವ ಉಳಿಸಿ; ಮಹಾದಾನ ಮಾಡಿ, ಮಾನವರಾಗಿʼ ಎಂಬ ಸಂದೇಶದೊಂದಿಗೆ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರಾಮಕೃಷ್ಣ ಕವಡಿಕೇರಿ – 9480508509, ದತ್ತಾತ್ರೇಯ ಭಟ್ಟ ಶೇವ್ಕಾರ-9480507990, ಜಿಎನ್‌ಜಿ-9448034649, ಗೋಪಾಲಕೃಷ್ಣ ಬರಗದ್ದೆ9482185464, ಗಣಪತಿ ಹಿರೇಸರ-9480718857 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.