ಅಂಕೋಲಾ: ತಾಲೂಕು ಹವ್ಯಕ ಸಂಘಟಿತ ಸಾಂಸ್ಕೃತಿಕ ಸಂಘದ ವತಿಯಿಂದ ‘ಹವ್ಯಕ ಸ್ನೇಹ ಸಮ್ಮೇಳನ–2026’ ಅಂಗವಾಗಿ ಪ್ರತಿಭಾ ಸನ್ಮಾನ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 9ರಂದು ಆಯೋಜಿಸಲಾಗಿದೆ.
ಶ್ರೀದೇವಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕಲ್ಲೇಶ್ವರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಹವ್ಯಕ ಅಗ್ರಣಿ’, ‘ಆದರ್ಶ ಕುಟುಂಬ’ ಹಾಗೂ ವಿಶೇಷ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮವನ್ನು ಮಾನ್ಯ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಪದಾಧಿಕಾರಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷ್ಣಮೂರ್ತಿ ಭಟ್ಟ (ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು), ಪ್ರಸನ್ನ ಕೆರೆಕೈ (ನಿರ್ದೇಶಕರು, ಅಖಿಲ ಹವ್ಯಕ ಮಹಾಸಭಾ/ಸ್ಪೇಸ್ ಬೋರ್ಡ್), ಆರ್.ಕೆ. ಭಟ್ಟ ಬಾವಿಕೇರಿ (ನಿವೃತ್ತ ಸಾರ್ವಜನಿಕ ಅಭಿಯೋಜಕರು), ಸೂರ್ಯನಾರಾಯಣ ಜಿ.ಭಟ್ಟ, ರಶ್ಮಿ ಪಿ.ಹೆಗಡೆ (ದೇಸಾಯಿ) (ವಲಯ ಅರಣ್ಯಾಧಿಕಾರಿ) ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಗಣಹವನ ಹಾಗೂ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಂಕೋಲಾ ತಾಲೂಕು ಹವ್ಯಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ಎಂ.ಪಿ. ಭಟ್ಟ ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.