Friday, October 23, 2026
HomeLocal Newsಮನೆ ನಂಬರ್ ಕೈ ಬಿಡುವ ಮಾರ್ಗಸೂಚಿ ಹಿಂಪಡೆಯಲು ಆಗ್ರಹ

ಮನೆ ನಂಬರ್ ಕೈ ಬಿಡುವ ಮಾರ್ಗಸೂಚಿ ಹಿಂಪಡೆಯಲು ಆಗ್ರಹ

ಅಂಕೋಲಾ: ಪಂಚತಂತ್ರ 2.0 ತಂತ್ರಾಂಶದ ಮೂಲಕ ಮನೆ ನಂಬರ್ ಕೈಬಿಡುವ ಮಾರ್ಗಸೂಚಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ‘ನಮ್ಮ ಮನೆ ನಮ್ಮ ಹಕ್ಕು’ ಜನಾಂದೋಲನದ ವತಿಯಿಂದ ತಾಲೂಕಿನ ಅಚವೆ, ಹಿಲ್ಲೂರು, ಮೊಗಟಾ, ವಾಸರಕುದ್ರಿಗೆ ಹಾಗೂ ಬೆಳಸೆ ಗ್ರಾಮ ಪಂಚಾಯತಿಗಳಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನೂರಾರು ಮಹಿಳೆಯರು, ರೈತರು ಹಾಗೂ ಕೂಲಿ ಕಾರ್ಮಿಕರು ಭಾಗವಹಿಸಿದ್ದರು. ತೆರಿಗೆ ಪಾವತಿಸುತ್ತಿರುವ ಬಡ ಕುಟುಂಬಗಳ ಮನೆಗಳ ಅಸ್ತಿತ್ವವನ್ನೇ ಕಸಿಯುವ ಅಮಾನವೀಯ ಕ್ರಮ ಇದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ಮಾಧ್ಯಮ ಸಹ ಸಂಚಾಲಕ ಜಗದೀಶ ನಾಯಕ ಮೊಗಟಾ, ಪ್ರಕೋಷ್ಟ ಜಿಲ್ಲಾ ಸಹ ಸಂಚಾಲಕ ರಾಘವೇಂದ್ರ ಭಟ್ಟ, ಜಿಲ್ಲಾ ಉಪಾಧ್ಯಕ್ಷೆ ಆರತಿ ಗೌಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ನಾಯ್ಕ ಹಾಗೂ ಶ್ರೀಧರ ನಾಯ್ಕ, ರೈತ ಸಂಘದ ಮಂಡಲ ಅಧ್ಯಕ್ಷ ಎಂ.ಎನ್. ಭಟ್ಟ ಅಚವೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಮಂಕಾಳು ಗೌಡ ಹಾಗೂ ನಾರಾಯಣ ಹೆಗಡೆ, ಪ್ರಮುಖರಾದ ಗಿರಿಯಪ್ಪ ನಾಯ್ಕ, ಭಾಸ್ಕರ ಹೆಗಡೆ, ನಾರಾಯಣ ಹೆಗಡೆ ಹಿಲ್ಲೂರು, ನಂದನ ಶೀರೊಡ್ಕರ, ಉದಯ ಗುನಗಾ, ಶೋಭಾ ನಾಯಕ, ಯುವ ಮೋರ್ಚಾ ಸಂದೇಶ ಗುನಗಾ ಸೇರಿದಂತೆ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share