ಅಂಕೋಲಾ: ತಾಲೂಕಿನ ವಿವಿಧ ಗ್ರಾಮಗಳ ಇಬ್ಬರು ಯುವತಿಯರು ಪ್ರತ್ಯೇಕ ಘಟನೆಗಳಲ್ಲಿ ನಾಪತ್ತೆಯಾಗಿದ್ದು, ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಕೇಣಿ ಗಾಬಿತವಾಡಾದ ನಿವಾಸಿ ಸಾಕ್ಷಿ ಸೂರ್ಯಕಾಂತ ಚೋಡಣಕರ (19) ಅವರು ಜೂನ್ 23ರಂದು ಮಧ್ಯಾಹ್ನ ಮನೆಯಿಂದ ಹೊರಗೆ ತೆರಳಿದ್ದು, ಬಳಿಕ ಮನೆಗೆ ಮರಳಿಲ್ಲ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.
ಯುವತಿ ಸುಮಾರು 5 ಅಡಿ 3 ಇಂಚು ಎತ್ತರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾಗುವ ವೇಳೆ ಮರೂನ್ ಬಣ್ಣದ ಚೂಡಿದಾರ್ ಧರಿಸಿದ್ದರು ಎಂದು ತಿಳಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಕುಂಟಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸೊಳ್ಳಿ ಗ್ರಾಮದ ನಿವಾಸಿ ಶ್ರೀದೇವಿ ಈಶ್ವರ ಗೌಡ (18) ಅವರು ಜೂನ್ 24ರಂದು ಮುಂಜಾನೆ ತಾಯಿಯ ಔಷಧಿ ತರಲು ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು.
ಆದರೆ ಆಸ್ಪತ್ರೆಗೆ ಅಥವಾ ಅಂಕೋಲಾಗೆ ತೆರಳದೆ ಬಳಿಕ ಮನೆಗೂ ಮರಳಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ರೀದೇವಿ ಸುಮಾರು 5 ಅಡಿ 3 ಇಂಚು ಎತ್ತರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾಗುವ ವೇಳೆ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದರು ಎನ್ನಲಾಗಿದೆ.
ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08388-220333 ಅಥವಾ ಮೊಬೈಲ್ ಸಂಖ್ಯೆ 9480805250 / 9480805268 ಗೆ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.