Friday, July 24, 2026
Join WhatsApp Group
HomeLifestyleಯಾವ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಏನು ಫಲ?

ಯಾವ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಏನು ಫಲ?

– ಎಲ್‌. ವಿವೇಕಾನಂದ ಆಚಾರ್ಯ.

ರಾತ್ರಿ ಮಲಗುವ ಸಮಯದಲ್ಲಿ ಯಾವ ದಿಕ್ಕಿಗೆ ತಲೆ ಹಾಕಬೇಕು ಎಂಬ ವಿಷಯ ಭಾರತೀಯ ವಾಸ್ತು ಶಾಸ್ತ್ರದಲ್ಲಿ ಮತ್ತು ಸಂಪ್ರದಾಯಗಳಲ್ಲಿ ಬಹಳ ಕಾಲದಿಂದ ಚರ್ಚೆಯ ವಿಷಯವಾಗಿದೆ.

ಪೂರ್ವ, ದಕ್ಷಿಣ ದಿಕ್ಕುಗಳು ಶುಭಕರವೆಂದು ಕೆಲವರು ನಂಬುತ್ತಾರೆ. ಉತ್ತರ ಅಥವಾ ಕೆಲವು ಕೋನ, ದಿಕ್ಕುಗಳನ್ನು ತಪ್ಪಿಸಲು ಸಲಹೆ ನೀಡುತ್ತಾರೆ. ಇಂತಹ ನಂಬಿಕೆಗಳು ಹಲವಾರು ಕುಟುಂಬಗಳಲ್ಲಿ ಇಂದಿಗೂ ಪಾಲನೆಯಲ್ಲಿವೆ.

ಮಲಗುವ ಸಮಯದಲ್ಲಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಯಾವ ಪ್ರಯೋಜನ ಎಂಬುದನ್ನು ಅರಿತು ನಿದ್ರಿಸಿದರೆ ಸಂಭವಿಸಬಹುದಾದ ಅನಾನುಕೂಲಗಳನ್ನು ತಪ್ಪಿಸಿ, ಉತ್ತಮ ನಿದ್ರೆಯನ್ನೂ ಪಡೆಯಬಹುದು.

ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ.

ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಮನಸ್ಸಿನಲ್ಲಿ ಅಶಾಂತಿ ಉಂಟಾಗುತ್ತದೆ. ಗೊಂದಲಮಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅನಾರೋಗ್ಯ, ಮರಣ ಸಂಭವ, ಕಾಯಿಲೆಗಳು ಉಂಟಾಗುತ್ತವೆ.

ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ವಿದ್ಯೆ, ಯಶಸ್ಸು, ಕೀರ್ತಿ, ಶಾಂತಿ ಲಭಿಸುತ್ತದೆ.

ಈಶಾನ್ಯ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಮನೆಯಲ್ಲಿ ಜಗಳ ಉಂಟಾಗುವ ಸಾಧ್ಯತೆ ಇರುತ್ತದೆ. ಸಾಲಗಳು ಹೆಚ್ಚಾಗುತ್ತವೆ.

ವಾಯುವ್ಯ ದಿಕ್ಕಿಗೆ ತಲೆ ಹಾಕಿ ಮಲಗಿದರೆ ವಿಚಿತ್ರ ಕಲ್ಪನೆ, ಹುಚ್ಚು ಆಲೋಚನೆಗಳು, ಮಾನಸಿಕ ತಲ್ಲಣಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಆಗ್ನೇಯ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಸಾಲಬಾಧೆ ಉಂಟಾಗುತ್ತದೆ ಹಾಗೂ ಸಾಲಗಾರರಿಂದ ಕಿರುಕುಳ ಹೆಚ್ಚಾಗುತ್ತದೆ.

ನೈರುತ್ಯ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅಭಿವೃದ್ಧಿ ಉಂಟಾಗುತ್ತದೆ ಹಾಗೂ ಯಶಸ್ಸು ದೊರೆಯುತ್ತದೆ.

ಇಂದೇ ನಿಮ್ಮ ಮಲಗುವ ದಿಕ್ಕನ್ನು ಪರಿಶೀಲಿಸಿ. ಸರಿಯಾದ ದಿಕ್ಕನ್ನು ಆರಿಸಿ. ಸುಖ, ಶಾಂತಿ ಮತ್ತು ಯಶಸ್ಸಿನ ಜೀವನವನ್ನು ಅನುಭವಿಸಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share