432 ಮದ್ಯದ ಬಾಟಲಿ ಜಪ್ತಿ | ಮೂವರು ಆರೋಪಿಗಳು ವಶಕ್ಕೆ
ಕಾರವಾರ: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಚಿತ್ತಾಕುಲಾ ಪೊಲೀಸರು, ಎರಡು ದ್ವಿಚಕ್ರ ವಾಹನಗಳೊಂದಿಗೆ 432 ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಿದ್ದಾರೆ.
ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಪರಶುರಾಮ ಬಿ. ಮಿರ್ಜಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ಅಸ್ನೋಟಿ ಗ್ರಾಮದ ಆರವ ಫಂಟಲ್ ಭಾಗದ ನಿವಾಸಿ ಸತೀಶ ವಿಠೋಬಾ ಕಲ್ಗುಟಕರ (45), ಮುಡಗೇರಿ ಗ್ರಾಮದ ಸಂಜಯ ಪಡ್ನೇಕರ (40) ಹಾಗೂ ಚೇತನ ದಿಲೀಪ ಬಾನಾವಳಿಕರ (41) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ವಿವಿಧ ಬ್ರ್ಯಾಂಡ್‌ಗಳ 432 ಮದ್ಯದ ಬಾಟಲಿಗಳು, ಎರಡು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಮದ್ಯದ ಮೌಲ್ಯ ₹26,304 ಆಗಿದ್ದು, ವಾಹನಗಳೊಂದಿಗೆ ಒಟ್ಟು ಜಪ್ತಿ ಸ್ವತ್ತಿನ ಮೌಲ್ಯ ₹30,304 ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.