Monday, September 7, 2026
Join WhatsApp Group
HomeLocal Newsಶಿಕ್ಷಣ, ಜಾಗೃತಿಯಿಂದಲೇ ಶೋಷಣೆಯ ವಿರುದ್ಧ ಹೋರಾಟ ಸಾಧ್ಯ

ಶಿಕ್ಷಣ, ಜಾಗೃತಿಯಿಂದಲೇ ಶೋಷಣೆಯ ವಿರುದ್ಧ ಹೋರಾಟ ಸಾಧ್ಯ

ಶಿರಸಿ: ಸಮಾಜದಲ್ಲಿರುವ ಮೌಢ್ಯತೆ ಮತ್ತು ಶೋಷಣೆಯ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಬೇಕು. ಶಿಕ್ಷಣ ಮತ್ತು ಜ್ಞಾನದಿಂದ ವಂಚಿತರಾದ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಸಂವಿಧಾನಬದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ ಹೇಳಿದರು.

ನಗರದ ಅಕ್ಷಯ್ ಗಾರ್ಡನ್ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಉತ್ತರ ಕನ್ನಡ ಜಿಲ್ಲಾ ಸಂಚಾಲನ ಸಮಿತಿಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ಕುಟುಂಬಗಳ ಸಾಕ್ಷರತಾ ಪ್ರಮಾಣ ಹೆಚ್ಚುವುದರೊಂದಿಗೆ ಸಮಾಜದಲ್ಲಿನ ಶೋಷಣೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಜನಪರ ಹೋರಾಟ, ಜನಪರ ಚಿಂತನೆ, ಶೋಷಿತ ವರ್ಗಗಳ ಹಕ್ಕುಗಳು ಹಾಗೂ ಸಾಮಾಜಿಕ ಅಭಿವೃದ್ಧಿಯ ದಿಸೆಯಲ್ಲಿ ಮಾನವ ಬಂಧುತ್ವ ವೇದಿಕೆ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಜಾತಿ-ಧರ್ಮಗಳ ನಡುವಿನ ಸಾಮರಸ್ಯ ವೃದ್ಧಿಯಾಗಬೇಕು. ಹಕ್ಕುಗಳಿಂದ ವಂಚಿತವಾಗಿರುವ ಸಮುದಾಯಗಳು ಸಂವಿಧಾನದ ಚೌಕಟ್ಟಿನೊಳಗೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಸುಭಾಷ್ ಕಾನಡೆ ಉಪಸ್ಥಿತರಿದ್ದರು. ಜಿಲ್ಲಾ ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ ರಾಜೇಶ್ ಮಿತ್ರ ನಾಯ್ಕ ತೆಂಗಿನಕೇರಿ ಅಧ್ಯಕ್ಷತೆ ವಹಿಸಿದ್ದರು. ಘಟ್ಟದ ಮೇಲಿನ ಸಂಚಾಲಕ ಮಹಾಬಲೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ತಾಲೂಕು ಸಂಚಾಲಕರಾದ ರಾಜು ನರೇಬೈಲ್ (ಶಿರಸಿ), ಮಂಜುನಾಥ ಮರಾಠಿ ನಾಗೂರು (ಕುಮಟಾ), ಚಂದ್ರು ಪೂಜಾರಿ (ಯಲ್ಲಾಪುರ), ಅರವಿಂದ ಗೌಡ (ಅಂಕೋಲಾ), ಮಹೇಶ ನಾಯ್ಕ ಕಾನಕ್ಕಿ (ಹೊನ್ನಾವರ), ಮಹೇಶ (ಮುಂಡಗೋಡ), ಇಬ್ರಾಹೀಂ ಗೌಡಳ್ಳಿ, ನೆಹರು ನಾಯ್ಕ ಹಾಗೂ ವಕೀಲ ಶಂಕರ ಹಳ್ಕರ್ ಉಪಸ್ಥಿತರಿದ್ದರು.

ಹಿರಿಯ ಚಿಂತಕ ಬಾಲಚಂದ್ರ ಶೆಟ್ಟಿ ಕುಂಟಕಣಿ, ಪೆದ್ರು ಸಿದ್ದಿ ಮಂಚಿಕೇರಿ, ರಾಘು ಕುಣಬಿ ಮಳವಳ್ಳಿ, ಸಂಕೇತ ನಾಯ್ಕ ಹಲಗೇರಿ, ಕಿರಣ ಮರಾಠಿ ದೇವನಳ್ಳಿ, ರೇಣುಕಾ ಪಟಗಾರ, ಹರೀಶ್ ಕಂಡ್ರಾಜಿ, ಅನಂತ ಗೌಡ ಹಾಗೂ ನಾಗರಾಜ ಮುಕ್ರಿ ಸೇರಿದಂತೆ ಹಲವರು ವಿಚಾರ ಮಂಡಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share