Monday, September 7, 2026
Join WhatsApp Group
HomeLocal Newsಮುಂಡಗೋಡ; ಒಂದೇ ತಾಲೂಕಿನಿಂದ ನಾಲ್ವರು ನಾಪತ್ತೆ!

ಮುಂಡಗೋಡ; ಒಂದೇ ತಾಲೂಕಿನಿಂದ ನಾಲ್ವರು ನಾಪತ್ತೆ!

ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಕಾಣೆಯಾಗಿರುವ ಮೂವರು ಪುರುಷರು ಹಾಗೂ ಓರ್ವ ಮಹಿಳೆಯ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಮಂಜುನಾಥ್ ಫಕೀರಪ್ಪ ಭೋವಿವಡ್ಡರ (35) ಅವರು ಮುಂಡಗೋಡ ತಾಲೂಕಿನ ಗಣೇಶಪೂರ ನಿವಾಸಿಯಾಗಿದ್ದು, 2026ರ ಏಪ್ರಿಲ್‌ 24ರಂದು ತಮ್ಮನ ಮನೆಯಿಂದ ಹೊರಗೆ ಹೋಗುವುದಾಗಿ ಹೇಳಿ ತೆರಳಿದ ಬಳಿಕ ಮರಳಿ ಮನೆಗೆ ಬಂದಿಲ್ಲ. ಸಂತೋಷ್ ಶೇಕಪ್ಪ ಮಲ್ಲೂರ (36) ಅವರು 2024ರ ಸೆಪ್ಟೆಂಬರ್‌ 10ರಂದು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ ನಂತರ ನಾಪತ್ತೆಯಾಗಿದ್ದಾರೆ. ಆಂಜನೇಯ ಜಟ್ಟಿಂಗಪ್ಪ ಕೃಷ್ಣಾಜಿ (45) ಅವರು 2025ರ ಜೂನ್‌ 19ರಂದು ಮನೆಯಿಂದ ಯಾರಿಗೂ ತಿಳಿಸದೇ ಹೊರಟವರು ಮರಳಿ ಬಂದಿಲ್ಲ. ಅದೇ ರೀತಿ ಆದಿತಿ ಆನಂದ ಬಸ್ತವಾಡ (29) ಅವರು 2025ರ ಮಾರ್ಚ್‌ 7ರಂದು ಮುಂಡಗೋಡದ ನಂದೀಶ್ವರನಗರದಲ್ಲಿರುವ ಮನೆಯಿಂದ ಹೊರಗೆ ತೆರಳಿ ನಾಪತ್ತೆಯಾಗಿದ್ದಾರೆ.

ಈ ನಾಲ್ವರೂ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಕಾರವಾರ ಪೊಲೀಸ್ ಕಂಟ್ರೋಲ್ ರೂಮ್-08382-226550, ಮುಂಡಗೋಡ ಪೊಲೀಸ್ ಠಾಣೆ-08301-222211, ಪಿಎಸ್‌ಐ-9480805275 ಅಥವಾ ಪಿಐ-9480805258 ಸಂಪರ್ಕಿಸಿ ಮಾಹಿತಿ ನೀಡುವಂತೆ ಮುಂಡಗೋಡ ಪೊಲೀಸ್ ತನಿಖಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share