ಯಲ್ಲಾಪುರ: ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ Thank U Universe Academy ವತಿಯಿಂದ ಗೃಹೋಪಯೋಗಿ ವಸ್ತುಗಳ ತಯಾರಿಕಾ ತರಬೇತಿ ಆಯೋಜಿಸಲಾಗಿದೆ.
ತರಬೇತಿಯಲ್ಲಿ ಮೈ ಸೋಪು, ಬಟ್ಟೆ ಸೋಪು, ಶಾಂಪೂ, ಪಾತ್ರೆ ತೊಳೆಯುವ ಜೆಲ್, ವಾಷಿಂಗ್ ಮಷಿನ್ ಜೆಲ್ ಹಾಗೂ ಪೌಡರ್, ಫಿನೈಲ್ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವ ವಿಧಾನಗಳನ್ನು ಕಲಿಸಲಾಗುತ್ತದೆ.
ಸೆ.27ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಯಲ್ಲಾಪುರದ LSMP ಹಾಲ್ನಲ್ಲಿ ತರಬೇತಿ ನಡೆಯಲಿದೆ. ಕೋರ್ಸ್ನ ಮೂಲ ಬೆಲೆ ರೂ.1,599 ಆಗಿದ್ದು, ಅಕಾಡೆಮಿ ಆಫರ್ನಡಿ ರೂ.399ಕ್ಕೆ ತರಬೇತಿ ಪಡೆಯುವ ಅವಕಾಶವಿದೆ.
ಸ್ವಯಂ ಉದ್ಯೋಗ ಆರಂಭಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆಸಕ್ತಿ ಹೊಂದಿರುವವರು ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9482185480, 9481554921, 9900882727 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
