Join WhatsApp Group
Ad
Home Crime ಕ್ರೂಸರ್ ಮೇಲೆ ಅಪಾಯಕಾರಿ ಸಾಹಸ; ಚಾಲಕನ ವಿರುದ್ಧ ಪ್ರಕರಣ

ಕ್ರೂಸರ್ ಮೇಲೆ ಅಪಾಯಕಾರಿ ಸಾಹಸ; ಚಾಲಕನ ವಿರುದ್ಧ ಪ್ರಕರಣ

0
4

ದಾಂಡೇಲಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಹುಮ್ಮಸ್ಸಿನಲ್ಲಿ ಜೀವದ ಜೊತೆ ಚೆಲ್ಲಾಟವಾಡಿದ ಆರೋಪದಡಿ ದಾಂಡೇಲಿ ಗ್ರಾಮೀಣ ಪೊಲೀಸರು ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಾಹನದ ಬಾನೆಟ್ ಹಾಗೂ ಮೇಲ್ಛಾವಣಿಯ ಮೇಲೆ ಯುವಕರನ್ನು ಕೂರಿಸಿಕೊಂಡು ಚಲಾಯಿಸಿದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಹರಿದಾಡಿದ ಬೆನ್ನಲ್ಲೇ ಪೊಲೀಸರು ಸ್ವಯಂಪ್ರೇರಿತವಾಗಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Ad

ಕೆಎ-24/ಎ-0450 ನೋಂದಣಿ ಸಂಖ್ಯೆಯ ಕ್ರೂಸರ್ ವಾಹನದ ಚಾಲಕ, ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದ ಇನ್ಫಿನಿಟಿ ಹೋಂಸ್ಟೇ ಸಮೀಪ ವಾಹನದ ಬಾನೆಟ್ ಹಾಗೂ ಟಾಪ್ ಮೇಲೆ ಸುಮಾರು 10ರಿಂದ 12 ಜನರನ್ನು ಕೂರಿಸಿಕೊಂಡು ಜನರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾನೆ.

ಈ ಅಪಾಯಕಾರಿ ಕೃತ್ಯದ ವಿಡಿಯೋವನ್ನು pradeep_poojari ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೋ ಪೊಲೀಸರ ಗಮನಕ್ಕೆ ಬಂದ ಬಳಿಕ, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

Previous articleರಸ್ತೆ ಸೂಚನಾ ಫಲಕಗಳ ಮೇಲೂ ಕಳ್ಳರ ಕಣ್ಣು!
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!