Friday, July 24, 2026
Join WhatsApp Group
HomeLocal Newsಬಿಚ್ಚೋಲಿಯಂನಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ

ಬಿಚ್ಚೋಲಿಯಂನಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ

ಕಾರವಾರ: ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿಯಂ, ಗೋವಾ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಗೋವಾದ ಹೀರಾಬಾಯಿ ಚಾಂಟೆ ಭವನ, ಶಾಂತಾದುರ್ಗ ಸರ್ಕಲ್, ಬಿಚ್ಚೋಲಿಯಂನಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ ಸೋಮವಾರ ನಡೆಯಿತು.

ಕಾರ್ಯಕ್ರಮದಲ್ಲಿ 1008 ಕನ್ನಡಿಗ ಮಹಿಳೆಯರಿಂದ ಪೂರ್ಣಕುಂಭ ಮೇಳವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಶಾಂತಾದುರ್ಗ ದೇವಸ್ಥಾನದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಗೋವಾ ಸಿ.ಎಂಗೆ ಮನವಿ ಸಲ್ಲಿಸಿ, ಈಗಾಗಲೇ ಗೋವಾದಲ್ಲಿ ನಿವೇಶನ ಪಡೆಯಲಾಗಿದ್ದು, ಅದರಂತೆ ಗೋವಾ ಸರ್ಕಾರದಿಂದ ಕಟ್ಟಡ ನಿರ್ಮಿಸಲು ನೀಡಿದ್ದ ಭರವಸೆಯಂತೆ ಕನ್ನಡ ಭವನ ನಿರ್ಮಿಸಲು ಕೂಡಲೇ ಅನುಮತಿ ನೀಡಬೇಕು. ಇದರಿಂದ ಸುಮಾರು 5 ಲಕ್ಷ ಜನ ಕನ್ನಡಿಗರು ವಾಸಿಸುತ್ತಿರುವ ಗೋವಾದಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವ ಕನ್ನಡಿಗರಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಅನುಕೂಲವಾಗಲಿದೆ ಎಂದರು.

ಗೋವಾದ ಪದ್ಮಶ್ರೀ ಶ್ರೀ ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ- ಶ್ರೀ ದತ್ತ ಪದ್ಮನಾಭ ಪೀಠ, ಶ್ರೀ.ಶ್ರೀ.ಷ.ಬ್ರ.ಚಂದ್ರಶೇಖರ ಶೀವಾಚಾರ್ಯ ಮಹಾಸ್ವಾಮಿಗಳು- ಹಿರೇಮಠ ಹುಕ್ಕೇರಿ ಬೆಳಗಾವಿ ಹಾಗೂ ಶ್ರೀ ಕರಿಸಿದ್ದೇಶ್ವರ ಪಟ್ಟದ ಪೂಜ್ಯರು, ಹಳೆತೋರಗಲ್ಲ ರಾಮದುರ್ಗ ಬೆಳಗಾವಿ, ಚಂದ್ರಕಾಂತ ಶೇಟಿಯೆ ಶಾಸಕರು ಬಿಚ್ಚೋಲಿ ಭಾಗವಹಿಸಿದ್ದರು.

ಸಾಂಸ್ಕೃತಿಕ ಸಮಾವೇಶದ ಉದ್ಘಾಟನೆಯನ್ನು ಮಾಯೆಮ್ ಶಾಸಕರು ಹಾಗೂ ಗೋವಾ ಸ್ಟೇಟ್ ಹಾರ್ಟಿಕಲ್ಚರ್ ಚೇರಮನ್ ಪ್ರೇಮೆಂದ್ರ ವಿ. ಶೇಟ್ ನೆರವೇರಿಸಿದರು. ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಚ್ಚೋಲಿ ನಗರಸಭೆ ಅಧ್ಯಕ್ಷ ಕುಂದನ ಪಳಾರಿ, ಗೋವಾ ಸರ್ಕಾರ ಮಾಜಿ ಸಭಾಪತಿ ರಾಜೇಶ ಪಾಟ್ನೆಕರ ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರ ಪ್ರಕಾಶ್ ಮತ್ತೀಹಳ್ಳಿ, ಕಾರ್ಯದರ್ಶಿ, ಉತ್ತರ ಭಾರತದ ಕನ್ವಿನರ ರಾಕೇಶ ಅಗರವಾಲ, ಗೋವಾ ಕರ್ನಾಟಕ ಕಾರ್ಯದರ್ಶಿ ಮುರಳಿ ಮೋಹನ ಶೆಟ್ಟಿ, ಬಿಚ್ಚೋಲಿ ಮಾಜಿ ನಗರಾಧ್ಯಕ್ಷ ಭಗವಾನ ಹರಮಲಕರ, ಭಾರತ ಸ್ವಾಭಿಮಾನಿ ಟ್ರಸ್ಟ್ ಪ್ರಭಾರಿ ಕಮಲೇಶ ಬಾಂದೆಕರ, ಸಂರಕ್ಷ ಗೋಶಾಲೆ ಶಿಕ್ಕೆರಿ ಗೋವಾ ರಾಘವ ಶೆಟ್ಟಿ, ಖ್ಯಾತ ಉದ್ಯಮಿ ಸಂತೋಷ ಶೆಟ್ಟಿ, ಮಹೇಶ ಬಾಬು ಸುರ್ವೆ ಭಾಗವಹಿಸಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share