Monday, September 7, 2026
Join WhatsApp Group
HomeCrimeಕಾತೂರಿನಲ್ಲಿ ಚೀಟಿಯಾಟ: ₹700 ನಗದು, ಚೀಟಿ ವಶಕ್ಕೆ

ಕಾತೂರಿನಲ್ಲಿ ಚೀಟಿಯಾಟ: ₹700 ನಗದು, ಚೀಟಿ ವಶಕ್ಕೆ

ಮುಂಡಗೋಡ: ಸಾರ್ವಜನಿಕ ಸ್ಥಳದಲ್ಲಿ ಓಸಿ ಜೂಜಾಟಕ್ಕೆ ಹಣ ಪಂಥ ಕಟ್ಟಿಸಿಕೊಳ್ಳುತ್ತಿದ್ದ ಆರೋಪದ ಮೇಲೆ ಕಾತೂರಿನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಂದ 700 ರೂ ನಗದು ಹಾಗೂ ಓಸಿ ಅಂಕಿ ಬರೆದ ಚೀಟಿಯನ್ನು ವಶಪಡಿಸಿಕೊಂಡಿದ್ದಾರೆ.

ಕಾತೂರ ಗ್ರಾಮದ ಬೊಮ್ಮನಳ್ಳಿ ರಸ್ತೆಯ ಕ್ರಾಸ್‌ ಬಳಿ ವ್ಯಕ್ತಿಯೊಬ್ಬ ಸಾರ್ವಜನಿಕರನ್ನು ಕರೆದು, ಓಸಿ ಜೂಜಾಟದ ಅಂಕೆಗಳ ಮೇಲೆ ಹಣ ಕಟ್ಟಿದರೆ ಒಂದು ರೂಪಾಯಿಗೆ 80 ರೂ ನೀಡುವುದಾಗಿ ಹೇಳುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಡಗೋಡ ಠಾಣೆ ಪಿಎಸ್‌ಐ ಮಂಜುನಾಥ ಗೌಡರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ.

ಈ ವೇಳೆ ಕಾತೂರಿನ ಜಿಲಾನಿ ಉಸ್ಮಾನಸಾಬ ಮರಗಡಿ (42) ಎಂಬಾತ ಓಸಿ ಚೀಟಿ ಬರೆಯುತ್ತಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ 700 ರೂ ನಗದು, ಒಂದು ಬಾಲ್‌ಪೆನ್‌ ಹಾಗೂ ಓಸಿ ಅಂಕೆ ಸಂಖ್ಯೆ ಬರೆದ ಚೀಟಿಯನ್ನು ವಶಕ್ಕೆ ಪಡೆಯಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share