Thursday, July 23, 2026
Join WhatsApp Group
HomeYour Voiceಮಲೆನಾಡಿನ ಊಟದಿಂದ ನಗರದ ಫಾಸ್ಟ್‌ಫುಡ್‌ ತನಕ

ಮಲೆನಾಡಿನ ಊಟದಿಂದ ನಗರದ ಫಾಸ್ಟ್‌ಫುಡ್‌ ತನಕ

ಮಲೆನಾಡು ಎಂದಾಕ್ಷಣ ನೆನಪಾಗುವುದು ಅಲ್ಲಿನ ಹಸಿರು ಪ್ರಕೃತಿ, ಮಂಜಿನ ಹಾದಿ, ಕಣ್ಣುಹಾಯಿಸಿದಷ್ಟು ದೂರದ ಬೆಟ್ಟ, ಹರಿವ ತೊರೆ ಮತ್ತು ಮನಸೂರೆಗೊಳ್ಳುವ ಆಹಾರ ವೈವಿಧ್ಯತೆ. ಮಲೆನಾಡಿನ ಸಾಂಪ್ರದಾಯಿಕ ಊಟಗಳ ಸುವಾಸನೆ, ರುಚಿ ಮತ್ತು ಆರೋಗ್ಯಕರ ಗುಣಗಳು ಇಂದಿಗೂ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿವೆ. ಆದರೆ ಕಾಲ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಗಳಲ್ಲೂ ದೊಡ್ಡ ಬದಲಾವಣೆ ಕಂಡು ಬರುತ್ತಿದೆ.

ಒಂದು ಕಾಲದಲ್ಲಿ ಮನೆಮನೆಗಳಲ್ಲಿ ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ರಾಗಿ ಮುದ್ದೆ, ತಂಬುಳಿ, ಸೊಪ್ಪಿನ ಸಾಂಬಾರು, ಕೆಸುವಿನ ಎಲೆಯ ಪಲ್ಯ, ಪತ್ರೊಡೆ ಹೀಗೆ ಪೌಷ್ಟಿಕಾಂಶ ತುಂಬಿದ ಆಹಾರಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಮನೆಯಲ್ಲೇ ತಯಾರಾಗುತ್ತಿದ್ದ ಈ ಊಟಗಳಲ್ಲಿ ರುಚಿಯ ಜೊತೆಗೆ ಆರೋಗ್ಯವೂ ಅಡಗಿತ್ತು. ಆದರೆ ಇಂದು ಆ ಪರಂಪರೆ ನಿಧಾನವಾಗಿ ಮರೆಯಾಗುತ್ತಿದ್ದು, ಅದರ ಜಾಗವನ್ನು ಫಾಸ್ಟ್‌ಫುಡ್‌ಗಳು ಆಕ್ರಮಿಸಿವೆ.

ಹಳ್ಳಿಗಳಲ್ಲಿ ಸಿಗುವ ಆಹಾರ ಮತ್ತು ನಗರಗಳಲ್ಲಿ ದೊರೆಯುವ ಆಹಾರಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ಹಳ್ಳಿಯ ಆಹಾರ ಪದಾರ್ಥಗಳು ನೈಸರ್ಗಿಕವಾಗಿದ್ದು, ಆರೋಗ್ಯ ಕಾಪಾಡುವ ಗುಣ ಹೊಂದಿರುತ್ತವೆ. ಮಲೆನಾಡಿನ ಮನೆಗಳಲ್ಲಿ ಚಕ್ಕೆ, ಲವಂಗ, ದಾಲ್ಚಿನ್ನಿ ಸೇರಿದಂತೆ ನೈಸರ್ಗಿಕ ಮಸಾಲೆಗಳನ್ನು ಬಳಸಿ ಅಡುಗೆ ಮಾಡಲಾಗುತ್ತದೆ. ತಾಜಾ ತರಕಾರಿ, ಸೊಪ್ಪು, ಕಾಳುಗಳು ಹಾಗೂ ಮನೆಯಲ್ಲೇ ಬೆಳೆದ ಪದಾರ್ಥಗಳ ಬಳಕೆ ಹೆಚ್ಚಿರುತ್ತದೆ. ಅದರಿಂದ ಅಲ್ಲಿನ ಜನರು ಹೆಚ್ಚು ಸದೃಢರಾಗಿರುತ್ತಾರೆ.

ಇದಕ್ಕೆ ವಿರುದ್ಧವಾಗಿ ನಗರ ಜೀವನದಲ್ಲಿ ಫಾಸ್ಟ್‌ಫುಡ್‌ ಸಂಸ್ಕೃತಿ ಹೆಚ್ಚುತ್ತಿದೆ. ಪಿಜ್ಜಾ, ಬರ್ಗರ್‌, ಮೊಮೊಸ್‌, ಪಾಪ್‌ಕಾರ್ನ್‌ ಮೊದಲಾದ ಆಹಾರಗಳು ರುಚಿಕರವೆನಿಸಿದರೂ, ಅವುಗಳಲ್ಲಿ ಬಳಸುವ ಬೇಕಿಂಗ್‌ ಸೋಡಾ, ಸಾಸ್‌, ವಿನೆಗರ್‌ ಹಾಗೂ ಕೃತಕ ಪದಾರ್ಥಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹಲವಾರು ಬಾರಿ ಹೋಟೆಲ್‌ಗಳಲ್ಲಿ ಉಳಿದ ಆಹಾರವನ್ನು ಶೀತಲೀಕರಣ ಮಾಡಿ ಮತ್ತೆ ಬಳಕೆ ಮಾಡುವುದೂ ಆರೋಗ್ಯಕ್ಕೆ ಹಾನಿಕಾರಕ.

ಆಹಾರವು ಮನುಷ್ಯನ ಬದುಕಿನ ಅತ್ಯಗತ್ಯ ಭಾಗ. ಆದ್ದರಿಂದ ರುಚಿಗಿಂತ ಆರೋಗ್ಯಕ್ಕೆ ಆದ್ಯತೆ ನೀಡುವುದು ಮುಖ್ಯ. ಮನೆಯಲ್ಲೇ ತಯಾರಿಸುವ ತಾಜಾ ಆಹಾರವನ್ನು ಹೆಚ್ಚು ಸೇವಿಸುವುದು ಮತ್ತು ಹೊರಗಿನ ಜಂಕ್‌ಫುಡ್‌ ಬಳಕೆಯನ್ನು ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ.

ಹಳ್ಳಿಯ ಜೀವನ, ಅಲ್ಲಿನ ಆಹಾರ ವೈವಿಧ್ಯತೆ ಮತ್ತು ನೈಸರ್ಗಿಕ ರುಚಿಗಳು ಇಂದಿಗೂ ಜನರನ್ನು ತನ್ನತ್ತ ಸೆಳೆಯುತ್ತಿವೆ. ನಗರ ಜೀವನದ ವೇಗದ ಮಧ್ಯೆಯೂ ಜನರು ಮತ್ತೆ ಹಳ್ಳಿಯ ಆಹಾರ ಪದ್ಧತಿಗಳತ್ತ ಮುಖ ಮಾಡುತ್ತಿರುವುದು ಆರೋಗ್ಯಕರ ಬದುಕಿನತ್ತದ ಒಳ್ಳೆಯ ಹೆಜ್ಜೆ.

ರಕ್ಷಿತಾ ಹೆಚ್. ಗೋಪಾಲ್
1st BA Journalism
ಎಂ.ಜಿ.ಎಂ ಕಾಲೇಜು, ಉಡುಪಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share