Monday, September 7, 2026
Join WhatsApp Group
HomeLocal Newsಎನ್.ಶೆಟ್ಟಿಹಳ್ಳಿ ಪಿಎಸಿಎಸ್ ಅಧ್ಯಕ್ಷರಾಗಿ ಜಯಂತಿ ಅವಿರೋಧ ಆಯ್ಕೆ

ಎನ್.ಶೆಟ್ಟಿಹಳ್ಳಿ ಪಿಎಸಿಎಸ್ ಅಧ್ಯಕ್ಷರಾಗಿ ಜಯಂತಿ ಅವಿರೋಧ ಆಯ್ಕೆ

ಎನ್.ಶೆಟ್ಟಿಹಳ್ಳಿ ಪಿಎಸಿಎಸ್ ಅಧ್ಯಕ್ಷರಾಗಿ ಜಯಂತಿ ಅವಿರೋಧ ಆಯ್ಕೆಬೆಟ್ಟದಪುರ : ಸಮೀಪದ ಎನ್.ಶೆಟ್ಟಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಯಂತಿ ಅವಿರೋಧವಾಗಿ ಗುರುವಾರ ಆಯ್ಕೆಯಾದರು.ಅಧಿಕಾರ ಹಂಚಿಕೆ ಒಪ್ಪಂದದಂತೆ ಮಾಜಿ ಅಧ್ಯಕ್ಷ ಎಸ್.ಎಚ್. ಜಯಣ್ಣ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಜಯಂತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಿತೇಂದ್ರ ಅವರನ್ನು ಅವಿರೋಧವಾಗಿ ಆಯ್ಕೆಯಾದವರು ಎಂದು ಘೋಷಿಸಿದರು. ಉಪಾಧ್ಯಕ್ಷ ಸಣ್ಣ ಹುಚ್ಚಯ್ಯ, ನಿರ್ದೇಶಕ ಎಚ್.ರಾಜೇಂದ್ರ, ಪಾಪಣ್ಣ ನಾಯಕ, ಎಸ್.ಪಿ.ಉಮೇಶ್, ಪುಟ್ಟೇಗೌಡ, ಕೃಷ್ಣೇಗೌಡ, ಜಗದೀಶ ಆರಾಧ್ಯ, ಎಸ್.ಜೆ.ನಾಗೇಂದ್ರ, ಕುಸುಮಾ , ಶ್ರೀಕಾಂತ, ದಿನೇಶ್, ಅಶೋಕ್, ತುಳಸಿ, ರಾಮೇಗೌಡ ಇದ್ದರು.ಬೆಟ್ಟದಪುರ ಸಮೀಪದ ಎನ್.ಶೆಟ್ಟಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಯಂತಿಯವರನ್ನು ನಿರ್ದೇಶಕರು ಅಭಿನಂದಿಸಿದರು.,

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share