ಶಿರಸಿ: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲೂಕುಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 18 ಶಿಕ್ಷಕರನ್ನು ಜಿಲ್ಲಾ ಮಟ್ಟದ ʻಅತ್ಯುತ್ತಮ ಶಿಕ್ಷಕʼ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಆರು ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿರಸಿ ತಾಲೂಕಿನ ಹಾರೇಪಾಲ ಸ.ಕಿ.ಪ್ರಾ ಶಾಲೆಯ ಅರುಣ ಭಟ್ಟ, ಸಿದ್ದಾಪುರ ತಾಲೂಕಿನ ಕಂಚಿಕೈ ಸ.ಕಿ.ಪ್ರಾ ಶಾಲೆಯ ಪ್ರೇಮಾ ನಾಯ್ಕ, ಯಲ್ಲಾಪುರ ತಾಲೂಕಿನ ಆನಗೋಡ ಸ.ಕಿ.ಪ್ರಾ ಶಾಲೆಯ ಮಾರುತಿ ಆಚಾರಿ, ಮುಂಡಗೋಡ ತಾಲೂಕಿನ ಸಂಜಯನಗರ ಸ.ಕಿ.ಪ್ರಾ ಶಾಲೆಯ ಗಣೇಶ ಸುಬ್ರಾಯ ಆಚಾರಿ, ಹಳಿಯಾಳ ತಾಲೂಕಿನ ಕೆ.ಕೆ.ಹಳ್ಳಿ ಸ.ಕಿ.ಪ್ರಾ ಶಾಲೆಯ ಸುಜಾತಾ ಎ.ಆರ್. ಹಾಗೂ ಜೋಯಿಡಾ ತಾಲೂಕಿನ ಕೊಂದರ ಸ.ಕಿ.ಪ್ರಾ ಶಾಲೆಯ ಈರಣ್ಣ ಪಗಡಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿರಸಿ ತಾಲೂಕಿನ ಕಸ್ತೂರ ಬಾ ನಗರದ ಸ.ಮಾ.ಹಿ.ಪ್ರಾ ಕನ್ನಡ ಶಾಲೆಯ ಮಹಾದೇವ ಸಂಭಾಜಿ, ಸಿದ್ದಾಪುರ ತಾಲೂಕಿನ ಹೊಸೂರು ಸ.ಹಿ.ಪ್ರಾ ಶಾಲೆಯ ಗಣಪತಿ ಗೊಂಡ, ಯಲ್ಲಾಪುರ ತಾಲೂಕಿನ ಶಿರನಾಲ ಸ.ಹಿ.ಪ್ರಾ ಶಾಲೆಯ ಸತೀಶ ಶೆಟ್ಟಿ, ಮುಂಡಗೋಡ ತಾಲೂಕಿನ ಮಳಗಿ ಕೆ.ಪಿ.ಎಸ್. ಹಿ.ಪ್ರಾ ಶಾಲೆಯ ಪುಷ್ಪಲತಾ ಗೋವಿಂದರಾಯ್ ನಾಯಕ, ಹಳಿಯಾಳ ತಾಲೂಕಿನ ಚಿಬ್ಬಲಗೇರಿ ಸ.ಹಿ.ಪ್ರಾ ಶಾಲೆಯ ಬೇಬಿ ದೊಡ್ಡಾ ಬೋರಕರ ಹಾಗೂ ಜೋಯಿಡಾ ತಾಲೂಕಿನ ರಾಮನಗರ ಸ.ಮಾ.ಹಿ.ಪ್ರಾ ಶಾಲೆಯ ವಿದ್ಯಾ ಸೀತಾರಾಮ ದೇಸಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಶಿರಸಿ ತಾಲೂಕಿನ ಇಸಳೂರು ಸ.ಪ್ರಾ.ಶಾಲೆಯ ದಿವಾಕರ ಮರಾಠಿ, ಸಿದ್ದಾಪುರ ತಾಲೂಕಿನ ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯ ಪ್ರವೀಣ ಕುರುಬರ್, ಯಲ್ಲಾಪುರ ತಾಲೂಕಿನ ಕಿರವತ್ತಿ ಕೆ.ಪಿ.ಎಸ್. ಪ್ರಾ ಶಾಲೆಯ ನಾಗರಾಜ ಟಿ. ನಾಯ್ಕ, ಮುಂಡಗೋಡ ತಾಲೂಕಿನ ಸ.ಪ.ಪೂ.ಕಾ. (ಪ್ರೌಢ ವಿಭಾಗ) ನಂ.-1ರ ರಮೇಶ ಪವಾರ, ಹಳಿಯಾಳ ತಾಲೂಕಿನ ತೇರಗಾಂವ ಸ. ಪ್ರೌಢಶಾಲೆಯ ಅರುಣ ಬೊಮ್ಮಯ್ಯ ನಾಯಕ ಹಾಗೂ ಜೋಯಿಡಾ ತಾಲೂಕಿನ ತಿನೈಘಾಟ ಸ. ಪ್ರೌಢಶಾಲೆಯ ಬಾಬು ತಾರಾಸಿಂಗ ಚವ್ಹಾಣ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಆರು ತಾಲೂಕುಗಳಿಂದ ವಿವಿಧ ವಿಭಾಗಗಳಲ್ಲಿ ಆಯ್ಕೆಯಾಗಿರುವ ಈ 18 ಶಿಕ್ಷಕರ ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.