Ad
Ad
Home Crime ಶಿರಸಿ | ಎರಡು ಗುಂಪುಗಳ ನಡುವೆ ಡಿಶುಂ ಡಿಶುಂ; ಇಬ್ಬರ ವಿರುದ್ಧ ಪ್ರಕರಣ 

ಶಿರಸಿ | ಎರಡು ಗುಂಪುಗಳ ನಡುವೆ ಡಿಶುಂ ಡಿಶುಂ; ಇಬ್ಬರ ವಿರುದ್ಧ ಪ್ರಕರಣ 

0
4

ಶಿರಸಿ: ವೈಯಕ್ತಿಕ ವೈಷಮ್ಯದ ವಿಚಾರವಾಗಿ ಮಾತುಕತೆ ನಡೆಸಲು ಒಂದೆಡೆ ಸೇರಿದ್ದ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಪರಸ್ಪರ ಹೊಡೆದಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಸ್ವಸ್ತಿಕ್ ಮೀಡಿಯಾದ ಸ್ವಘೋಷಿತ ಪತ್ರಕರ್ತ ರವೀಶ್ ಹೆಗಡೆ ಹಾಗೂ ಪ್ರದೀಪ್ ಶೆಟ್ಟಿ ಹಾಗೂ ಇನ್ನಿತರರ ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ. 26ರಂದು ಸಂಜೆ 5 ಗಂಟೆಗೆ ಯಲ್ಲಾಪುರ–ಶಿರಸಿ ರಸ್ತೆಯ ರಾಘವೇಂದ್ರ ಸರ್ಕಲ್ ಸಮೀಪದ ಭಟ್ಟರ ಹೊಟೇಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೊಂಡ್ಲಬೈಲ್ ಮೂಲದ, ಪ್ರಸ್ತುತ ಬೆಂಗಳೂರಿನ ಚನ್ನಸಂದ್ರದ ಸಾಯಿ ನಿಸರ್ಗ ಲೇಔಟ್‌ನಲ್ಲಿ ವಾಸವಿರುವ ರವೀಶ್ ಹೆಗಡೆ (27) ಹಾಗೂ ಶಿರಸಿಯ ಗಣೇಶ ನಗರದ ಭಾಸ್ಕರ ಕಾಲೋನಿ ನಿವಾಸಿ ಪ್ರದೀಪ್ ಶೆಟ್ಟಿ (46) ಅವರ ನಡುವೆ ವೈಯಕ್ತಿಕ ವೈಷಮ್ಯವಿತ್ತು ಎನ್ನಲಾಗಿದೆ.

ಈ ವಿಚಾರವಾಗಿ ಮಾತುಕತೆ ನಡೆಸಲು ಎರಡೂ ಗುಂಪಿನವರನ್ನು ಸ್ಥಳಕ್ಕೆ ಕರೆಯಿಸಲಾಗಿತ್ತು. ಈ ವೇಳೆ ಎರಡೂ ಕಡೆಯವರು ಕೂಗಾಟ, ಚೀರಾಟ ನಡೆಸಿ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಸೇರಿದಂತೆ ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಮಂಜುಳಾ ಹಾಲಗಿ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದು, ಎರಡೂ ಗುಂಪಿನ ಆರೋಪಿತರ ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವೀಶ್ ಹೆಗಡೆ ಸೋಶಿಯಲ್ ಮೀಡಿಯಾಗಳಲ್ಲಿ ಸ್ವಸ್ತಿಕ್ ಮೀಡಿಯಾ ನ್ಯೂಸ್ ಎಂಬ ಪೇಜ್ ನಡೆಸುತ್ತಿದ್ದು, ಇತ್ತೀಚೆಗಷ್ಟೇ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಸಿಲುಕಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.

NO COMMENTS

LEAVE A REPLY

Please enter your comment!
Please enter your name here

error: Content is protected !!