Friday, July 24, 2026
Join WhatsApp Group
HomeLocal News‘ಹವ್ಯಕ ಪಲ್ಲವ–2026’ ಪುರಸ್ಕಾರಕ್ಕೆ ಭಾಜನರಾದ ಸುಮೇಧಾ ಗಾಂವ್ಕರ್

‘ಹವ್ಯಕ ಪಲ್ಲವ–2026’ ಪುರಸ್ಕಾರಕ್ಕೆ ಭಾಜನರಾದ ಸುಮೇಧಾ ಗಾಂವ್ಕರ್

ಯಲ್ಲಾಪುರ: ರಾಜ್ಯ ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಮಲ್ಲೇಶ್ವರಂನಲ್ಲಿ ನಡೆದ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಕುಮಾರಿ ಸುಮೇಧಾ ಅಣ್ಣಯ್ಯ ಗಾಂವ್ಕರ್ (ಕಂಚಿಮನೆ) ಅವರು “ಹವ್ಯಕ ಪಲ್ಲವ–2026” ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನೀಡಲಾಗುವ ಈ ಪ್ರತಿಷ್ಠಿತ ಪುರಸ್ಕಾರವನ್ನು, ರಾಜ್ಯ ಹವ್ಯಕ ಮಹಾಸಭಾದ ಅಧ್ಯಕ್ಷರು ಹಾಗೂ ಖ್ಯಾತ ಆಯುರ್ವೇದ ತಜ್ಞರಾದ Dr. Giridhar Kaje ಅವರಿಂದ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಮರ್ಶಕ ಹಾಗೂ ಕವಿ Chintamani Kodlekere, ಆರ್ಥಿಕ ತಜ್ಞ Gopalakrishna Hegde, ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ B. S. Raj ಹಾಗೂ ಮಹಾಲಕ್ಷ್ಮೀಪುರಂ ಬ್ರಾಹ್ಮಣ ಸಭಾ ಅಧ್ಯಕ್ಷ Raghavendra Bhat ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮೇಧಾ ಅವರ ಸಾಧನೆಯನ್ನು ಮೆಚ್ಚಿ ಗಣ್ಯರು ಅಭಿನಂದನೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share