Friday, July 24, 2026
Join WhatsApp Group
HomeUncategorizedಅನುಮಾನಾಸ್ಪದ ರೀತಿಯಲ್ಲಿ ಗೋ ಸಾಗಾಟ; ವಾಹನ ತಪಾಸಣೆ

ಅನುಮಾನಾಸ್ಪದ ರೀತಿಯಲ್ಲಿ ಗೋ ಸಾಗಾಟ; ವಾಹನ ತಪಾಸಣೆ

ಯಲ್ಲಾಪುರ: ಯಲ್ಲಾಪುರ -ಶಿರಸಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದರಿಂದ ರಕ್ತ ಸುರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು  ಮಂಚಿಕೇರಿ ಬಳಿ ಆ ವಾಹನವನ್ನು ಅಡ್ಡಗಟ್ಟಿದ್ದು, ವಾಹನದಲ್ಲಿ ದನಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ತಕ್ಷಣ ಸಾರ್ವಜನಿಕರು ಆ ಗಾಡಿಯನ್ನು ಮಂಚಿಕೇರಿ ಪೊಲೀಸ್ ಠಾಣೆಗೆ ಕರೆದೊಯ್ದಾಗ ಪೊಲೀಸ್ ಸಿಬ್ಬಂದಿ ದೀಪಕ ನಾಯ್ಕ ಅವರು ದಾಖಲೆಗಳ ತಪಾಸಣೆ ಮಾಡಿದರು. ಈ ವೇಳೆ ಗೋವುಗಳನ್ನು ಹುಲೆಕಲ್ ಬಳಿಯ ಗೋಶಾಲೆಗೆ ಒಯ್ಯುತ್ತಿರುವುದಾಗಿ ವಾಹನದಲ್ಲಿದ್ದವರು ತಿಳಿಸಿದರು. ಅಲ್ಲಿದ್ದ ಫಕೀರಪ್ಪ ಭೋವಿವಡ್ಡರ, ನಿತಿನ್ ನಾಯ್ಕ, ಪವನ ನಾಯ್ಕ, ಮುನ್ನ ಸುಗಮ, ಪ್ರಥಮ್ ನಾಯ್ಕ ಅವರು ವಾಹನದಲ್ಲಿದ್ದವರ ವಿವರ ವಿಚಾರಿಸಿದರು.

ಅಮಿತ್ ಗಬ್ಬುರ್, ನಾಗರಾಜ ಭೋವಿವಡ್ಡರ , ರಿಹಾನ್ ಶೇಕ್, ನಿತಿನ್ ನಾಯ್ಕ, ರಾಘವೇಂದ್ರ ಭಟ್ಟ, ಗಣಪತಿ ಹಾಗೂ ಜಾಫರ್ ಸೇರಿ ಆ ಜಾನುವಾರುಗಳು ಗೋಶಾಲೆಗೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡರು. ಹಿಂಸಾತ್ಮಕ ರೀತಿಯಲ್ಲಿ ಹಸು ಸಾಗಾಟ ಮಾಡದಂತೆ ಎಲ್ಲರೂ ಸೇರಿ ವಾಹನದವರಿಗೆ ಸೂಚನೆ ನೀಡಿದರು. ನಂತರ ಜಾನುವಾರುಗಳಿಗೆ ಆಹಾರ-ನೀರು ಒದಗಿಸಿ ಗೋಶಾಲೆಗೆ ಕಳುಹಿಸಲಾಯಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share