ಯಲ್ಲಾಪುರ ವಿದ್ಯುತ್ ಗುತ್ತಿಗೆದಾರರ ಸಂಘದ ಧ್ವಜಾರೋಹಣದಲ್ಲಿ ವೇಣುಗೋಪಾಲ ಸದ್ಗುಣಿ ಅಭಿಮತ
ಯಲ್ಲಾಪುರ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಯಲ್ಲಾಪುರ ಸಮಿತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅನೇಕ ವರ್ಷಗಳ ಹೋರಾಟ ಹಾಗೂ ನಮ್ಮ ಹಿರಿಯರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ವಿಶೇಷವಾಗಿ ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯದ ಮಹತ್ವ ಹಾಗೂ ಅದರ ಹಿಂದಿರುವ ತ್ಯಾಗವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮಾಕಾಂತ ನಾಯ್ಕ ಹಾಗೂ ನಿವೃತ್ತ ಶಿಕ್ಷಕ ಎಸ್.ಎಲ್. ಜಾಲಿಸತ್ಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಇಟಿ ಹೇಮಂತ ಗೌಡ, ಶಾಖಾಧಿಕಾರಿಗಳಾದ ನಾಗರಾಜ ಆಚಾರಿ, ಲಕ್ಷ್ಮಣ ಜೋಗಳೇಕರ, ಕನಕಪ್ಪ, ಛಾಯಪ್ಪ ಮುರಡಿ, ಲೆಕ್ಕಾಧಿಕಾರಿ ವಿನಾಯಕ ಶೇಟ, ಸದಾಶಿವ ಭಟ್ಟ, ಕೃಷ್ಣ ಭಟ್ಟಮಠಾರಿ, ಗುತ್ತಿಗೆದಾರರಾದ ಶಾಂತಾರಾಮ ಹೆಗಡೆ, ರಿಗನ್ ಡಿಸೋಜಾ, ಮಕ್ಬೂಲ್ ಸೈಯದ್ ಅಲಿ, ದಾದಾಪೀರ್, ಶ್ರೀನಿವಾಸ ಪಟಗಾರ, ಪ್ರಶಾಂತ ಮಹೇಕರ, ಮಾರುತಿ ಗೋವೆಕರ, ಜಾಫರ್, ನಾಗರಾಜ ಕೊರನಳ್ಳಿ, ಶಾಬಾದ್ ಶೇಖ್, ಹಸೇನಸಾಬ ಕಾನಳ್ಳಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.